ಗೂಗಲ್ ಪೇ ಮೂಲಕ ಸುಲಭವಾಗಿ 1 ಲಕ್ಷ ಸಾಲ ಪಡೆಯುವುದು ಹೇಗೆ ನೋಡಿ

Krishnaveni K
ಸೋಮವಾರ, 16 ಸೆಪ್ಟಂಬರ್ 2024 (11:41 IST)
ಬೆಂಗಳೂರು: ಡಿಜಿಟಲ್ ಇಂಡಿಯಾ ಜನಪ್ರಿಯವಾದ ಬಳಿಕ ಎಲ್ಲರೂ ಗೂಗಲ್ ಪೇನಲ್ಲಿ ಸುಲಭವಾಗಿ ಹಣ ಪಾವತಿ ಮಾಡುತ್ತಿದ್ದಾರೆ. ಆದರೆ ಇದೀಗ ಗೂಗಲ್ ಪೇನಿಂದ ಮತ್ತೊಂದು ಹೊಸ ಆಫರ್ ಬಂದಿದೆ.

ಇನ್ನು ಮುಂದೆ ಗೂಗಲ್ ಪೇ ಸಕ್ರಿಯ ಬಳಕೆದಾರರು ಸುಲಭವಾಗಿ 1 ಲಕ್ಷ ರೂ.ವರೆಗೆ ಸಾಲ ಪಡೆದುಕೊಳ್ಳಬಹುದಾಗಿದೆ. ಇದಕ್ಕೆ ಹೆಚ್ಚು ದಾಖಲೆಗಳು ಬೇಕಾಗಿಲ್ಲ, ಬ್ಯಾಂಕ್ ಶಾಖೆಗೂ ಹೋಗಬೇಕಾಗಿಲ್ಲ. ಮನೆಯಲ್ಲಿಯೇ ಕುಳಿತು 1 ಲಕ್ಷ ರೂ.ವರೆಗೆ ಸುಲಭವಾಗಿ ಸಾಲ ಪಡೆದುಕೊಳ್ಳಬಹುದಾಗಿದೆ.

ಜೀ ಪೇ ಲೋನ್ ಗೆ ಬೇಕಾದ ದಾಖಲೆಗಳು
ಆಧಾರ್ ಕಾರ್ಡ್
ಪ್ಯಾನ್ ಕಾರ್ಡ್
ಬ್ಯಾಂಕ್ ಐಎಫ್ಎಸ್ ಸಿ ಕೋಡ್
ಇದರೊಂದಿಗೆ ಗೂಗಲ್ ಪೇನೊಂದಿಗೆ ದಾಖಲಾದ ಮೊಬೈಲ್ ಸಂಖ್ಯೆ ಇರಬೇಕು. ಹೆಚ್ಚಾಗಿ ವಾಣಿಜ್ಯ ಬಳಕೆಗಳಿಗೆ ಗೂಗಲ್ ಪೇ ಬಳಕೆ ಮಾಡಿ ಹೆಚ್ಚು ಕ್ರೆಡಿಟ್ ಸ್ಕೋರ್ ಹೊಂದಿದ್ದರೆ ಲೋನ್ ಪಡೆಯಬಹುದಾಗಿದೆ. ನಿಮ್ಮ ಕ್ರೆಡಿಟ್ ಸ್ಕೋರ್ ಆಧರಿಸಿ ಸಾಲ ಸೌಲಭ್ಯ ನೀಡಲಾಗುತ್ತದೆ. ಐಡಿಎಫ್ ಸಿ ಫಸ್ಟ್ ಬ್ಯಾಂಕ್, ಫೆಡರಲ್ ಬ್ಯಾಂಕ್ ನಂತಹ ಪಾಲುದಾರ ಬ್ಯಾಂಕ್ ಗಳ ಸಹಯೋಗದೊಂದಿಗೆ ಈ ಸೌಲಭ್ಯ ನೀಡಲಾಗುತ್ತದೆ.

ಅರ್ಜಿ ಸಲ್ಲಿಸುವುದು ಹೇಗೆ
ಗೂಗಲ್ ಪೇ ಆಪ್ ತೆರೆದು ಲಾಗಿನ್ ಆಗಿ. ಈಗ ವ್ಯಾಪಾರ ಅಥವಾ ಪಾವತಿ ಟ್ಯಾಬ್ ನಲ್ಲಿ ಲೋನ್ ವಿಭಾಗಕ್ಕೆ ಹೋಗಿ. ನಿಮ್ಮ ವಹಿವಾಟಿನ ಕ್ರೆಡಿಟ್ ಸ್ಕೋರ್ ಅನುಸರಿಸಿ ಸಾಲದ ಕೊಡುಗೆ ಸಿಗುತ್ತದೆ. ಈಗ ಆಧಾರ್, ಪ್ಯಾನ್ ಕಾರ್ಡ್ ಹಾಗೂ ಐಎಫ್ಎಸ್ ಸಿ ಕೋಡ್ ನಮೂದಿಸಿ ಮಾಹಿತಿ ಭರ್ತಿ ಮಾಡಿ.

ಮರು ಪಾವತಿಗಾಗಿ ಇಎಂಐ ಆಯ್ಕೆ ಪ್ರೆಸ್ ಮಾಡಿ. ನಂತರ ನಿಮ್ಮ ಮೊಬೈಲ್ ಗೆ ಒಟಿಪಿ ಬರುತ್ತದೆ. ಅರ್ಜಿಯನ್ನು ಪರಿಶೀಲಿಸಲು ಈ ಒಟಿಪಿ ಅಗತ್ಯವಾಗಿದೆ. ಈಗ ಜಿಎಸ್ ಟಿ ಮತ್ತು ಇತರೆ ಶುಲ್ಕ ಕಡಿತದ ಬಳಿಕ ಸಾಲದ ಮೊತ್ತ ನಿಮ್ಮ ಬ್ಯಾಂಕ್ ಖಾತೆಗೆ ನೇರವಾಗಿ ಜಮೆ ಆಗುತ್ತದೆ.

ಸಂಬಂಧಿಸಿದ ಸುದ್ದಿ

ಓದಲೇಬೇಕು

ಮಚ್ಚು ಹಿಡಿದು ರೀಲ್ಸ್‌: ರಜತ್‌ನನ್ನು ಮತ್ತೇ ಪೊಲೀಸ್ ಅರೆಸ್ಟ್ ಮಾಡಿದ್ಯಾಕೆ, ಇಲ್ಲಿದೆ ಕಾರಣ

Preity Zinta: ಚಾಹಲ್ ನಾಲ್ಕು ವಿಕೆಟ್ ಪಡೆದಿದ್ದಕ್ಕೂ ಸಾರ್ಥಕವಾಯಿತು, Troll

7 ವರ್ಷಗಳ ಬಳಿಕ ಮತ್ತೇ ನನ್ನನ್ನೇ ಯಾಕೆ ಪ್ರಶ್ನಿಸುತ್ತಿದ್ದಾರೆ ಎಂದು ಅರ್ಥವಾಗುತ್ತಿಲ್ಲ: ರಾಬರ್ಟ್‌ ವಾದ್ರಾ

Sonu Gowda: ದಿಢೀರನೇ ರೀಲ್ಸ್ ಮಾಡಿ ಕ್ಷಮಕೋರಿದ ಬಿಗ್‌ಬಾಸ್‌ ಸ್ಪರ್ಧಿ, ಕೆಟ್ಟ ಮೇಲೆ ಬುದ್ಧಿ ಬಂತಾ ಎಂದ ನೆಟ್ಟಿಗರು

ಲಕ್ಷ್ಮೀ ನಿವಾಸ ಸೀರಿಯಲ್ ನಟನ ಮನೆಗೆ ಗಂಡು ಮಗುವಿನ ಆಗಮನ

ಎಲ್ಲವನ್ನೂ ನೋಡು

ತಾಜಾ

ರಾಷ್ಟ್ರ ರಾಜಧಾನಿಯಲ್ಲಿ ಹೆಚ್ಚಿದ ಶೀತಗಾಳಿ: ಪಾತಾಳಕ್ಕಿಳಿದ ತಾಪಮಾನ, ದೆಹಲಿಯಲ್ಲಿ ಆರೆಂಜ್ ಅಲರ್ಟ್

ಬೆಂಗಳೂರಿನ ಮಹಿಳಾ ಸೇನಾಧಿಕಾರಿಗೆ ವಿಶ್ವಸಂಸ್ಥೆಯ ಸೆಕ್ರಟರಿ ಜನರಲ್ ಪ್ರಶಸ್ತಿ

ಸುದ್ದಿಗೆ ಕಾರಣಾವಾದ ಮಾಜಿ ಐಎಎಸ್ ಅಧಿಕಾರಿ ಪೂಜಾ ಖೇಡ್ಕರ್ ಮನೆಯಲ್ಲಿ ಇದೆಂಥಾ ಘಟನೆ

ಡಿಕೆ ಶಿವಕುಮಾರ್ ಗೆ ವೇದಿಕೆ ಮೇಲೆ ಮಾತಿನಲ್ಲೇ ತಿವಿದ ಮಲ್ಲಿಕಾರ್ಜುನ ಖರ್ಗೆ

ಭಾರತ, ಜರ್ಮನಿ ಸಂಬಂಧವನ್ನು ಎತ್ತಿ ತೋರಿದ ಮೋದಿ, ಫ್ರೆಡ್ರಿಕ್ ಆತ್ಮೀಯ ಕ್ಷಣ

ಮುಂದಿನ ಸುದ್ದಿ
Show comments