Select Your Language

Notifications

webdunia
webdunia
webdunia
webdunia

ಅಯೋಧ್ಯೆ ಹುಂಡಿ ಕಳ್ಳತನಕ್ಕೆ ಆರ್ ಎಸ್ಎಸ್ ದೇಶದ ಕ್ಷಮೆ ಕೇಳಬೇಕು: ಪ್ರಿಯಾಂಕ್ ಖರ್ಗೆ

Priyank Kharge
ಬೆಂಗಳೂರು: ಅಯೋಧ್ಯೆಯಲ್ಲಿ ಹುಂಡಿ ಕಳ್ಳತನವಾಗಿರುವುದಕ್ಕೆ ಆರ್ ಎಸ್ಎಸ್ ದೇಶದ ಕ್ಷಮೆ ಯಾಚಿಸಬೇಕು ಎಂದು ಗೃಹಸಚಿವ ಪ್ರಿಯಾಂಕ್ ಖರ್ಗೆ ಹೇಳಿದ್ದಾರೆ.

ಅಯೋಧ್ಯೆಯಲ್ಲಿ ಹುಂಡಿ ಕಳ್ಳತನವಾಗಿರುವ ಬಗ್ಗೆ ಆರ್ ಎಸ್ಎಸ್ ತೀವ್ರ ವಿಷಾಧ ವ್ಯಕ್ತಪಡಿಸಿತ್ತು. ಈ ಬಗ್ಗೆ ಪ್ರತಿಕ್ರಿಯಿಸಿರುವ ಸಚಿವ ಪ್ರಿಯಾಂಕ್ ಖರ್ಗೆ ಹುಂಡಿ ಕಳ್ಳತನ ಮಾಡಿದ್ದಕ್ಕೆ ಕ್ಷಮೆ  ಯಾಚಿಸಿದ್ದಾ ಎಂದು ವ್ಯಂಗ್ಯ ಮಾಡಿದ್ದಾರೆ.

ಮೊದಲು ಅವರು ನಮ್ಮಿಂದ ತಪ್ಪಾಗಿದೆ ಎಂದು ಒಪ್ಪಿಕೊಳ್ಳಬೇಕು. ತಪ್ಪು ಒಪ್ಪಿಕೊಂಡು ಸಾರ್ವಜನಿಕರಲ್ಲಿ ಬಹಿರಂಗವಾಗಿ ಕ್ಷಮೆ ಯಾಚಿಸಬೇಕು. ಸುಮ್ಮನೆ ವಿಷಾಧವಾಗಿದೆ ಎಂದು ಪ್ರೆಸ್ ನೋಟ್ ಕೊಡುವುದಲ್ಲ ಎಂದು ಪ್ರಿಯಾಂಕ್ ಖರ್ಗೆ ಹೇಳಿದ್ದಾರೆ.

ಈ ಅಕ್ರಮದಲ್ಲಿ ವಿಎಚ್ ಪಿ ಕಾರ್ಯಕರ್ತರು, ಪದಾಧಿಕಾರಿಗಳು ಇದ್ದಾರೆ. ವಿಎಚ್ ಪಿ ಆರ್ ಎಸ್ಎಸ್ ನ ಅಂಗ ಸಂಸ್ಥೆ. ಅವರೆಲ್ಲಾ ಸಂಬಂಧಿಕರೇ ಇದ್ದಾರೆ. ಮೋಹನ್ ಭಾಗವತ್ ಮುಚ್ಚುಮರೆ ಮಾಡಲ್ಲ ಅಂತಾರೆ. ಹಾಗಿದ್ದರೆ ಇದಕ್ಕೆ ಯಾಕೆ ಮುಚ್ಚುಮರೆ. ಬಹಿರಂಗ ಕ್ಷಮೆ ಕೇಳಲಿ ಎಂದಿದ್ದಾರೆ.

Share this Story:

Follow Webdunia kannada

ಮುಂದಿನ ಸುದ್ದಿ

ಮಿಸ್ಲೆರಿ ಬಾಟಲ್‌ನಲ್ಲಿ ನೀರೆಂದು ಆಸಿಡ್ ಕುಡಿದ ಶಿಕ್ಷಕಿ, ಸ್ಥಿತಿ ಗಂಭೀರ, Video