Publish Date: Thu, 09 Jul 2026 (14:38 IST)
Updated Date: Thu, 09 Jul 2026 (14:40 IST)
ಬೆಂಗಳೂರು: ಬಡವರ ಮಕ್ಕಳನ್ನು ಆರ್ ಎಸ್ಎಸ್ ಬಳಸಿಕೊಳ್ತಿದೆ. ಆದರೆ ಬಿಜೆಪಿಯವರ ಮಕ್ಕಳು ಒಬ್ಬರಾದರೂ ಸಂಘದಲ್ಲಿ ಪೂರ್ಣಪ್ರಮಾಣದಲ್ಲಿ ತೊಡಗಿಸಿಕೊಂಡಿದ್ದಾರಾ ಎಂದು ಗೃಹ ಸಚಿವ ಪ್ರಿಯಾಂಕ್ ಖರ್ಗೆ ಪ್ರಶ್ನಿಸಿದ್ದಾರೆ.
ಗೃಹ ಸಚಿವರಾದ ಬಳಿಕ ಪ್ರಿಯಾಂಕ್ ಖರ್ಗೆ ಆರ್ ಎಸ್ಎಸ್ ಮೇಲೆ ಅವಕಾಶ ಸಿಕ್ಕಾಗಲೆಲ್ಲಾ ಮುಗಿಬೀಳುತ್ತಿದ್ದಾರೆ. ಇದೀಗ ಆರ್ ಎಸ್ಎಸ್ ಮೇಲೆ ಮತ್ತೊಮ್ಮೆ ಕೆಂಡ ಕಾರಿದ್ದಾರೆ. ಬಡವರ ಮಕ್ಕಳನ್ನು ಆರ್ ಎಸ್ಎಸ್ ಬಳಸಿಕೊಳ್ತಿದೆ ಎಂದಿದ್ದಾರೆ.
ಬಡವರ ಮಕ್ಕಳಿಗೆ ಧರ್ಮ ರಕ್ಷಣೆ, ಗೋ ರಕ್ಷಣೆ ಮಾಡಿ ಅಂತಾರೆ. ಇದಕ್ಕೆಲ್ಲಾ ಬಡವರ ಮಕ್ಕಳನ್ನು ಮಾತ್ರ ಬಿಡ್ತಾರೆ. ಅದಕ್ಕೆಲ್ಲಾ ಬಿಜೆಪಿಯವರ ಮಕ್ಕಳು ಹೋಗ್ತಾರಾ? ಒಬ್ಬನೇ ಒಬ್ಬ ಬಿಜೆಪಿ ನಾಯಕರ ಮಕ್ಕಳು ಆರ್ ಎಸ್ಎಸ್ ನಲ್ಲಿ ಪೂರ್ಣ ಪ್ರಮಾಣದ ಪ್ರಚಾರಕಾಗಿದ್ದರೆ ತೋರಿಸಲಿ ನೋಡೋಣ ಎಂದು ಸವಾಲು ಹಾಕಿದ್ದಾರೆ.
ಬಡವರ ಮಕ್ಕಳನ್ನು ಘರ್ಷಣೆಯಾಗುವಲ್ಲಿಗೆ ಕಳುಹಿಸ್ತಾರೆ, ಬಿಜೆಪಿಯವರ ಮಕ್ಕಳನ್ನು ಕಳಿಸ್ತಾರಾ? ವಿಜಯದಶಮಿಯ ಒಂದು ದಿನ ಚಡ್ಡಿ, ಪ್ಯಾಂಟ್ ಹಾಕೋದು ಅಲ್ಲ ಎಂದು ಪ್ರಿಯಾಂಕ್ ವಾಗ್ದಾಳಿ ನಡೆಸಿದ್ದಾರೆ.
About Writer
ಕೃಷ್ಣವೇಣಿ ಕೆ
Completed bachelor degree in Journalism and communication in SDMC Ujire. 15 years of experience as journalist. Worked as sub editor and reporter. Specialties in sports, politics and entertainment.....
ಮತ್ತಷ್ಟು ಓದಿ