Select Your Language

Notifications

webdunia
webdunia
webdunia
webdunia

ದೇಶದಲ್ಲಿ ನಾನೇ ನಂ 1 ಗೃಹಸಚಿವ, ಹೇಳ್ಕೊಳ್ಳೋರು ಹೇಳ್ಕೊಳ್ಳಿ: ಡಾ ಜಿ ಪರಮೇಶ್ವರ್

Dr G Parameshwar

Krishnaveni K

ಬೆಂಗಳೂರು , ಶನಿವಾರ, 16 ಆಗಸ್ಟ್ 2025 (16:59 IST)
ಬೆಂಗಳೂರು: ಡಾ ಜಿ ಪರಮೇಶ್ವರ್ ತಮ್ಮ ಹೇಳಿಕೆಗಳಿಗೆ ಟ್ರೋಲ್ ಮಾಡುವವರಿಗೆ ತಮ್ಮದೇ ಶೈಲಿಯಲ್ಲಿ ತಿರುಗೇಟು ನೀಡಿದ್ದಾರೆ. ದೇಶದ ನಂ 1 ಗೃಹಸಚಿವ ನಾನೇ ಎಂದಿದ್ದಾರೆ.

ಪೊಲೀಸ್ ಇಲಾಖೆಗೆ ಸಂಬಂಧಿಸಿದ ಯಾವುದೇ ಪ್ರಶ್ನೆಗಳನ್ನು ಮಾಧ್ಯಮಗಳು ಕೇಳಿದರೆ ನನಗೆ ಗೊತ್ತಿಲ್ಲ, ಮಾಹಿತಿಯಿಲ್ಲ ಎಂದು ಗೃಹಸಚಿವ ಡಾ ಜಿ ಪರಮೇಶ್ವರ್ ಹೇಳುತ್ತಾರೆ. ಇದೇ ಕಾರಣಕ್ಕೆ ಅವರು ಸೋಷಿಯಲ್ ಮೀಡಿಯಾದಲ್ಲಿ ಟ್ರೋಲ್ ಗೊಳಗಾಗುತ್ತಾರೆ.

ಇದೇ ವಿಚಾರವನ್ನು ಇಂದು ಮಾಧ್ಯಮಗಳು ಅವರ ಗಮನ ಸೆಳೆದಿದ್ದಾರೆ. ಸೋಷಿಯಲ್ ಮೀಡಿಯಾದಲ್ಲಿ ನಿಮ್ಮನ್ನು ಗೊತ್ತಿಲ್ಲ ಸಚಿವ ಎಂದು ಟ್ರೋಲ್ ಮಾಡುತ್ತಿದ್ದು ಅದೀಗ ಟ್ರೆಂಡ್ ಆಗ್ತಿದೆ. ಅದರ ಬಗ್ಗೆ ಏನು ಹೇಳ್ತೀರಿ ಎಂದು ಕೇಳಲಾಗಿದೆ.

ಇದಕ್ಕೆ ಉತ್ತರಿಸಿದ ಅವರು ‘ಹೇಳ್ಕೊಳ್ರೀ ಬಿಡ್ರಿ. ಅವರಿಗೆ ಚ್ಯಾಟ್ ಜಿಟಿಪಿ ನೋಡಕ್ಕೆ ಹೇಳಿ. ಈ ದೇಶದಲ್ಲಿ ಗೃಹಸಚಿವರಲ್ಲಿ ಪ್ರಥಮ ಸ್ಥಾನದಲ್ಲಿರೋದು ಡಾ ಜಿ ಪರಮೇಶ್ವರ್ ಹೆಸರು. ಗೊತ್ತಿಲ್ಲ ಎಂದು ನಾನು ಹೇಳಿರುವಂತದ್ದು ಸ್ವಾಭಾವಿಕವಾಗಿ ಹೇಳಿರುವಂತಹದ್ದು. ಈಗ ನೀವೇನೋ ಪ್ರಶ್ನೆ ಕೇಳ್ತೀರಿ. ಎಲ್ಲದಕ್ಕೂ ನಾನು ಉತ್ತರ ಕೊಡಕ್ಕಾಗುತ್ತಾ?’ ಎಂದಿದ್ದಾರೆ.

Share this Story:

Follow Webdunia kannada

ಮುಂದಿನ ಸುದ್ದಿ

ಬೆಳಗಾವಿಯಿಂದ ಮುಂಬೈಗೆ ಹೊರಟಿದ್ದ ವಿಮಾನದಲ್ಲಿ ತಾಂತ್ರಿಕ ದೋಷ, ಪೈಲೆಟ್‌ ಸಮಯ ಪ್ರಜ್ಞೆ ತಪ್ಪಿಸಿತು ದೊಡ್ಡ ದುರಂತ