ಬೆಂಗಳೂರು: ಗೋಲ್ಡ್ ಸ್ಮಗ್ಲಿಂಗ್ ಆರೋಪಿ ನಟಿ ರನ್ಯಾ ರಾವ್ ಮದುವೆಗೆ ನೀವು ಲಕ್ಷಗಳ,ಲ್ಲಿ ಗಿಫ್ಟ್ ಕೊಟ್ಟಿದ್ದರಂತೆ ಎಂದು ಕೇಳಿದ್ದಕ್ಕೆ ಗೃಹಸಚಿವ ಡಾ ಡಿಕೆ ಶಿವಕುಮಾರ್ ಇದನ್ನು ಹೋಗಿ ಡಿಸಿಎಂ ಡಿಕೆ ಶಿವಕುಮಾರ್ ಅವರನ್ನೇ ಕೇಳಿ ಎಂದಿದ್ದಾರೆ.
ಮೊನ್ನೆಯಷ್ಟೇ ಡಾ ಜಿ ಪರಮೇಶ್ವರ್ ಒಡೆತನದ ಸಿದ್ಧಾರ್ಥ ಶಿಕ್ಷಣ ಸಂಸ್ಥೆ ಮೇಲೆ ಇಡಿ ದಾಳಿಯಾಗಿತ್ತು. ರನ್ಯಾ ರಾವ್ ಖಾತೆಗೆ ಸಿದ್ಧಾರ್ಥ ಸಂಸ್ಥೆಯಿಂದ ಪ್ರಭಾವಿಯೊಬ್ಬರ ಶಿಫಾರಸ್ಸಿನ ಮೇಲೆ 40 ಲಕ್ಷ ರೂ. ವರ್ಗಾವಣೆಯಾಗಿತ್ತು ಎಂದು ಆರೋಪಿಸಲಾಗಿತ್ತು.
ಈ ಬಗ್ಗೆ ಪ್ರತಿಕ್ರಿಯಿಸಿದ್ದ ಡಿಸಿಎಂ ಡಿಕೆ ಶಿವಕುಮಾರ್, ರನ್ಯಾ ಮದುವೆ ಸಮಯದಲ್ಲಿ ಪರಮೇಶ್ವರ್ 15-20 ಲಕ್ಷ ರೂ. ಗಿಫ್ಟ್ ಕೊಟ್ಟಿದ್ದಾರಂತೆ. ಅವರ ಜೊತೆ ನಾನು ಮಾತನಾಡಿದ್ದೇನೆ. ಎಲ್ಲರೂ ಡೊನೇಷನ್ ಅಂತ ಮಾಡ್ತಾರೆ. ಪರಮೇಶ್ವರ್ ಕೂಡಾ ಹಾಗೆ ಮಾಡಿದ್ದಾರಷ್ಟೇ. ಅವರು ಸಜ್ಜನ ರಾಜಕಾರಣಿ ಎಂದಿದ್ದರು.
ಇದು ಪರಮೇಶ್ವರ್ ಅಸಮಾಧಾನಕ್ಕೆ ಕಾರಣವಾಗಿದೆ. ಮಾಧ್ಯಮಗಳು ಗಿಫ್ಟ್ ಬಗ್ಗೆ ಪರಮೇಶ್ವರ್ ಅವರನ್ನು ಕೇಳಿದಾಗ ಹೋಗಿ ಡಿಕೆ ಶಿವಕುಮಾರ್ ಅವರನ್ನೇ ಕೇಳಿ ಎಂದು ಉರಿದುಬಿದ್ದಿದ್ದಾರೆ.