ಬೆಂಗಳೂರು: ಕರ್ನಾಟಕದಾದ್ಯಂತ ಈಗ ಮುಂಗಾರು ಮಳೆ ರುದ್ರನರ್ತನ ಮಾಡುತ್ತಿದೆ. ಇಂದು ರಾಜ್ಯದ ಯಾವ ಜಿಲ್ಲೆಗಳಲ್ಲಿ ಹೆಚ್ಚು ಮಳೆಯಾಗಲಿದೆ ಇಲ್ಲಿದೆ ವಿವರ.
ಹವಾಮಾನ ವರದಿ ಪ್ರಕಾರ ಈ ವಾರವಿಡೀ ರಾಜ್ಯದಾದ್ಯಂತ ಮಳೆಯಾಗಲಿದೆ. ಅದರಲ್ಲೂ ಕೆಲವೊಂದು ಜಿಲ್ಲೆಗಳಲ್ಲಂತೂ ವಿಪರೀತ ಮಳೆಯಾಗಲಿದೆ. ವಿಶೇಷವಾಗಿ ಕರಾವಳಿ ಜಿಲ್ಲೆಗಳಲ್ಲಿ ಭಾರೀ ಮಳೆಯಾಗುತ್ತಿದೆ. ಈ ವಾರವಿಡೀ ಈ ಜಿಲ್ಲೆಗಳಲ್ಲಿ ಇದೇ ವಾತಾವರಣ ಮುಂದುವರಿಯಲಿದೆ.
ಇನ್ನು ರಾಜ್ಯ ರಾಜಧಾನಿ ಬೆಂಗಳೂರಿನಲ್ಲಿ ಸಾಧಾರಣ ಮಳೆಯಾಗಿದ್ದರೂ ದಿನವಿಡೀ ಮೋಡ ಕವಿದ ವಾತಾವರಣ, ವಿಪರೀತ ಗಾಳಿ ಬೀಸುತ್ತಿದೆ. ಪರಿಣಾಮ ಜನರು ಮನೆಯಿಂದ ಹೊರಬರಲೂ ಹಿಂದೆ ಮುಂದೆ ನೋಡುವಂತಾಗಿದೆ. ಬೆಂಗಳೂರಿನಲ್ಲಿ ಗರಿಷ್ಠ ತಾಪಮಾನ 24 ಡಿಗ್ರಿಗೆ ಬಂದರೆ ಕನಿಷ್ಠ ತಾಪಮಾನ 21-20 ಡಿಗ್ರಿಯಷ್ಟಿದೆ.
ಹವಾಮಾನ ವರದಿ ಪ್ರಕಾರ ಇಂದು ಉಡುಪಿ, ದಕ್ಷಿಣ ಕನ್ನಡ, ಉತ್ತರ ಕನ್ನಡ ಜಿಲ್ಲೆಗಳಲ್ಲಿ ಇಂದು ಭಾರೀ ಮಳೆಯಾಗಲಿದೆ ಎಂದು ಹವಾಮಾನ ವರದಿ ಹೇಳಿದೆ. ಕರಾವಳಿ ಜಿಲ್ಲೆಗಳಿಗೆ ಇಂದೂ ರೆಡ್ ಅಲರ್ಟ್ ಘೋಷಣೆ ಮಾಡಲಾಗಿದೆ. ಉಳಿದೆಲ್ಲಾ ಜಿಲ್ಲೆಗಳಲ್ಲಿ ಇಂದು ಸಾಧಾರಣ ಮಳೆ ಮತ್ತು ದಿನವಿಡೀ ಮೋಡ ಕವಿದ ವಾತಾವರಣ ಜೊತೆಗೆ ಭಾರೀ ಗಾಳಿ ಕಂಡುಬರಲಿದೆ.