Select Your Language

Notifications

webdunia
webdunia
webdunia
webdunia

ರನ್ಯಾ ರಾವ್ ಗೆ ಪರಮೇಶ್ವರ್ 25 ಲಕ್ಷ ರೂ ಕೊಟ್ಟಿದ್ದಾರೆ: ಒಪ್ಪಿಕೊಂಡ ಡಿಕೆ ಶಿವಕುಮಾರ್

DK Shivakumar

Krishnaveni K

ಬೆಂಗಳೂರು , ಗುರುವಾರ, 22 ಮೇ 2025 (14:24 IST)
ಬೆಂಗಳೂರು: ಗೋಲ್ಡ್ ಸ್ಮಗ್ಲಿಂಗ್ ಕೇಸ್ ನಲ್ಲಿ ಬಂಧಿತಳಾಗಿರುವ ನಟಿ ರನ್ಯಾ ರಾವ್ ಗೆ ಗೃಹಸಚಿವ ಡಾ ಜಿ ಪರಮೇಶ್ವರ್ 25 ಲಕ್ಷ ರೂ. ನೀಡಿದ್ದಾರೆ ಎಂದು ಡಿಸಿಎಂ ಡಿಕೆ ಶಿವಕುಮಾರ್ ಒಪ್ಪಿಕೊಂಡಿದ್ದಾರೆ.

ಪರಮೇಶ್ವರ್ ಒಡೆತನದ ಸಿದ್ಧಾರ್ಥ ಶಿಕ್ಷಣ ಸಂಸ್ಥೆಗಳ ಮೇಲೆ ಇಡಿ ರೇಡ್ ನಡೆದ ಬಗ್ಗೆ ಪ್ರತಿಕ್ರಿಯಿಸಿರುವ ಡಿಸಿಎಂ ಡಿಕೆ ಶಿವಕುಮಾರ್, ಪರಮೇಶ್ವರ್ ಜೊತೆ ಮಾತನಾಡಿದ್ದೇನೆ. ರನ್ಯಾಗೆ 25 ಲಕ್ಷ ರೂ. ನೀಡಿದ್ದಾರಂತೆ. ಆ ಕುಟುಂಬದವರಿಗೆಂದು ಹಣ ಕೊಟ್ಟಿರಬಹುದು. ಪರಮೇಶ್ವರ್ ಪ್ರಭಾವೀ ವ್ಯಕ್ತಿ. ರನ್ಯಾ ಅಕ್ರಮ ಮಾಡಿದ್ದಕ್ಕೆ ಶಿಕ್ಷೆಯಾಗಲಿ’ ಎಂದಿದ್ದಾರೆ.

ಚಾರಿಟೇಬಲ್ ಟ್ರಸ್ಟ್ ಗಳು ನೆರವು ನೀಡುತ್ತವೆ. ಅದೇ ರೀತಿ ರನ್ಯಾಗೂ ಸಹಾಯ ಮಾಡಿರಬಹುದು. ಮದುವೆ, ಆಸ್ಪತ್ರೆ ಎಂದು ಬಿಲ್ ನೀಡಿರಬಹುದು ಎಂದು ಡಿಕೆಶಿ ಹೇಳಿದ್ದಾರೆ. ಈ ಮೂಲಕ ರನ್ಯಾಗೆ ಹಣ ನೀಡಿದ್ದನ್ನು ಸಮರ್ಥಿಸಿಕೊಂಡಿದ್ದಾರೆ.

ಡಾ ಜಿ ಪರಮೇಶ್ವರ್ ಒಡೆತನದ ಶಿಕ್ಷಣ ಸಂಸ್ಥೆಯಿಂದ ರನ್ಯಾ ರಾವ್ ಗೆ 40 ಲಕ್ಷ ರೂ. ಹಣ ವರ್ಗಾವಣೆ ಮಾಡಲಾಗಿದೆ ಎಂದು ಆರೋಪವಿದೆ. ಈ ಸಂಬಂಧ ಇಡಿ ದಾಖಲೆಗಳನ್ನು ಪರಿಶೀಲನೆ ನಡೆಸಿತ್ತು.

Share this Story:

Follow Webdunia kannada

ಮುಂದಿನ ಸುದ್ದಿ

G Parameshwar: ಇಡಿ ದಾಳಿಯಾದ ಬೆನ್ನಲ್ಲೇ ಪರಮೇಶ್ವರ್ ಬೆನ್ನಿಗೆ ನಿಂತ ಸಚಿವರು