ಬೆಂಗಳೂರು: ಆರ್ ಎಸ್ಎಸ್ ಚಟುವಟಿಕೆಗಳಿಗೆ ನಿರ್ಬಂಧ ಹೇರಿರುವ ಸರ್ಕಾರದ ಕ್ರಮದ ವಿರುದ್ಧ ಆಕ್ರೋಶ ವ್ಯಕ್ತಪಡಿಸುತ್ತಿರುವ ಬಿಜೆಪಿಗೆ ತಿರುಗೇಟು ನೀಡುವ ಭರದಲ್ಲಿ ಸಚಿವ ಪ್ರಿಯಾಂಕ್ ಖರ್ಗೆ ಬಿಜೆಪಿಯವರ ಮಕ್ಕಳು ಸಾರ್ವಜನಿಕವಾಗಿ ಗೋಮೂತ್ರ ಕುಡಿಯಲಿ ಎಂದು ವಿವಾದ ಸೃಷ್ಟಿಸಿದ್ದಾರೆ.
ಬೆಂಗಳೂರಿಗೆ ಗೂಗಲ್ ಎಐ ಹಬ್ ಕೈ ತಪ್ಪಿ ಹೋಗಿದ್ದು, ರಸ್ತೆ ಸಮಸ್ಯೆಗಳ ವೈಫಲ್ಯ ಮುಚ್ಚಿಡಲು ಪ್ರಿಯಾಂಕ್ ಖರ್ಗೆ ಈಗ ಆರ್ ಎಸ್ಎಸ್ ವಿಚಾರ ಹೊರಹಾಕಿದ್ದಾರೆ ಎಂದು ಬಿಜೆಪಿ ಆರೋಪಿಸಿದೆ. ಇದಕ್ಕೆ ಖರ್ಗೆ ಇಂದು ಮಾಧ್ಯಮಗಳಿಗೆ ಪ್ರತಿಕ್ರಿಯಿಸಿದ್ದಾರೆ.
ಹೌದು ವಿಷಯಾಂತರ ಮಾಡಲೆಂದೇ ನಾವು ಆರ್ ಎಸ್ಎಸ್ ವಿಚಾರ ಎತ್ತಿದ್ದೇವೆ. ತಪ್ಪೇನಿದೆ? ಇದು ಕಾನೂನಿಗೆ ವಿರುದ್ಧವಾ? ಆರ್ ಎಸ್ಎಸ್ ವಿಚಾರ ಸುಳ್ಳೇನಲ್ವಲ್ಲಾ? ಎಲ್ಲಾ ಸಂಘಟನೆಗಳಿಗೂ ಒಂದೇ ಕಾನೂನು ತರಲು ಹೊರಟಿದ್ದೇವೆ. ಅಂಬೇಡ್ಕರ್, ಬುದ್ಧ ಅವರ ತತ್ವಗಳನ್ನು ಸಮಾಜದಲ್ಲಿ ತರಲು ಹೊರಟಿದ್ದೇವೆ ಏನು ತಪ್ಪಿದೆ? ಎಂದಿದ್ದಾರೆ.
ಬಿಜೆಪಿಯವರು ನಮ್ಮ ಸರ್ಕಾರ ತಪ್ಪು ಮಾಡಿದ್ರೆ ಬೀದಿಗಳಿದು ಹೋರಾಟ ಮಾಡಲಿ ಯಾರು ಬೇಡ ಅಂದೋರು? ಬಿಜೆಪಿಯವರು ಮೊದಲು ತಮ್ಮ ಮಕ್ಕಳನ್ನು ಆರ್ ಎಸ್ಎಸ್ ಶಾಲೆಗಳಿಗೆ ಸೇರಿಸಲಿ. ಅವರ ಮಕ್ಕಳು ಸಾರ್ವಜನಿಕವಾಗಿ ಗೋಮೂತ್ರ ಕುಡಿಯಲಿ ಎಂದು ಪ್ರಿಯಾಂಕ್ ಖರ್ಗೆ ಸವಾಲೆಸೆದಿದ್ದಾರೆ.