Select Your Language

Notifications

webdunia
webdunia
webdunia
webdunia

ಕೊರೊನಾಕ್ಕೆ ಹೆದರಿ ಖಾಸಗಿ ಆಸ್ಪತ್ರೆಗಳ ಲೈಸನ್ಸ್ ರದ್ದು : ಡಿಸಿ ಎಚ್ಚರಿಕೆ

ಕೊರೊನಾಕ್ಕೆ ಹೆದರಿ ಖಾಸಗಿ ಆಸ್ಪತ್ರೆಗಳ ಲೈಸನ್ಸ್ ರದ್ದು : ಡಿಸಿ ಎಚ್ಚರಿಕೆ
ಗದಗ , ಸೋಮವಾರ, 13 ಏಪ್ರಿಲ್ 2020 (19:55 IST)
ಕೊರೊನಾ ವೈರಸ್ ತಡೆಯುವಲ್ಲಿ ಕೈಜೋಡಿಸಬೇಕಿದ್ದ ಖಾಸಗಿ ಆಸ್ಪತ್ರೆಗಳು ಓಪಿಡಿ ಬಂದ್ ಮಾಡಿದ್ದು, ಈ ಆಸ್ಪತ್ರೆಗಳ ಲೈಸನ್ಸ್ ರದ್ದುಗೊಳಿಸೋದಾಗಿ ಡಿಸಿ ಎಚ್ಚರಿಕೆ ನೀಡಿದ್ದಾರೆ.

ಕೊರೊನಾ ಸೋಂಕು ತಡೆಗಟ್ಟುವ ನಿಟ್ಟಿನಲ್ಲಿ ಮುಂಜಾಗ್ರತಾ ಕ್ರಮವಾಗಿ ನಿಲ್ಲಿಸಲಾಗಿದ್ದ ಹೊರರೋಗಿ ವಿಭಾಗವನ್ನು ಪುನಃ ಆರಂಭಿಸುವಂತೆ ಗದಗ ಜಿಲ್ಲೆಯ ಎಲ್ಲ ಖಾಸಗಿ ಆಸ್ಪತ್ರೆಗಳಿಗೆ ಈಗಾಗಲೇ ಸೂಚನೆ ನೀಡಲಾಗಿದೆ.

ಇದುವರೆಗೆ ಖಾಸಗಿ ಆಸ್ಪತ್ರೆಗಳು ಓ.ಪಿ.ಡಿ. ಸೇವೆಯನ್ನು ಪ್ರಾರಂಭಿಸದೇ ಇರುವುದು ಗಮನಕ್ಕೆ ಬಂದಿದೆ. ಕೂಡಲೆ ಜಿಲ್ಲೆಯ ಎಲ್ಲ ಖಾಸಗಿ ಆಸ್ಪತ್ರೆಗಳು ಸಾರ್ವಜನಿಕರಿಗೆ ವೈದ್ಯಕೀಯ ಸೇವೆಯನ್ನು ಒದಗಿಸಬೇಕು. ತಪ್ಪಿದ್ದಲ್ಲಿ ಕೆ.ಪಿ.ಎಂ.ಎ ನಿಯಮಗಳನ್ವಯ ಆಸ್ಪತ್ರೆಗೆ ನೀಡಲಾದ ಪರವಾನಗಿಯನ್ನು ರದ್ದು ಪಡಿಸಲಾಗುವುದು ಎಂದು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ. ಸತೀಶ್ ಬಸರೀಗಿಡದ ಎಚ್ಚರಿಕೆ ನೀಡಿದ್ದಾರೆ.




Share this Story:

Follow Webdunia kannada

ಮುಂದಿನ ಸುದ್ದಿ

ಪತ್ನಿ ಎದುರಲ್ಲೇ ಕೆಲಸದಾಕೆ ಜೊತೆ ಪಲ್ಲಂಗ ಏರಿದ ಗಂಡ : ಮುಂದೇನಾಯ್ತು?