Select Your Language

Notifications

webdunia
webdunia
webdunia
webdunia

ರಾಜ್ಯದ ಈ ಜಿಲ್ಲೆಗೆ ಕಾಲಿಡೋಕೆ ಹೆದರ್ತಿದೆ ಕೊರೊನಾ ವೈರಸ್

ರಾಜ್ಯದ ಈ ಜಿಲ್ಲೆಗೆ ಕಾಲಿಡೋಕೆ ಹೆದರ್ತಿದೆ ಕೊರೊನಾ ವೈರಸ್
ರಾಯಚೂರು , ಸೋಮವಾರ, 13 ಏಪ್ರಿಲ್ 2020 (19:00 IST)
ಮಹಾಮಾರಿ ಕೊರೊನಾ ವೈರಸ್ ಗೆ ವಿಶ್ವದ ದೊಡ್ಡ ದೊಡ್ಡ ರಾಷ್ಟ್ರಗಳೇ ಬೆಚ್ಚಿಬೀಳುತ್ತಿವೆ. ಆದರೆ ಇಲ್ಲಿ ಕೊರೊನಾಗೆ ನೋ ಎಂಟ್ರಿ.

ರಾಯಚೂರು ಜಿಲ್ಲೆಯಲ್ಲಿ ಕೊರೊನಾ ತಡೆಗೆ ಜಿಲ್ಲಾಡಳಿತ ಕೈಗೊಂಡ ಎಲ್ಲಾ ಆಗತ್ಯ ಕ್ರಮಗಳ ಹಿನ್ನೆಲೆಯಲ್ಲಿ ಪ್ರಧಾನಿ ನರೇಂದ್ರ ಮೋದಿ ಘೋಷಿಸಿದ 21 ದಿನಗಳ ಲಾಕ್‌ಡೌನ್ ಪೂರ್ಣಗೊಂಡಿದೆ. ಇಲ್ಲಿಯವರೆಗೂ ಜಿಲ್ಲೆಯಲ್ಲಿ ಕೊರೊನಾ ವೈರಸ್‌ನ ಒಂದು ಪಾಸಿಟಿವ್ ಪ್ರಕರಣವೂ ಪತ್ತೆಯಾಗಿಲ್ಲ.

ಲಾಕ್‌ಡೌನ್ ಘೋಷಣೆಯಾಗುತ್ತಿದ್ದಂತೆಯೇ ಜಿಲ್ಲಾಡಳಿತ ರಾಜ್ಯ ಹಾಗೂ ಕೇಂದ್ರ ಸರ್ಕಾರದ ಮಾರ್ಗಸೂಚಿ ಅನ್ವಯ ವಾಹನ ಸಂಚಾರ ನಿರ್ಬಂಧ , ಸಾಮಾಜಿಕ ಅಂತರ ಕಾಪಾಡಿರುವುದು, ವೈಯಕ್ತಿಕ ಸ್ವಚ್ಛತೆಗೆ ಆದ್ಯತೆಗೆ ನೀಡಿರುವುದು ಮತ್ತು ಶಂಕಿತರನ್ನು ಪತ್ತೆ ಹಚ್ಚಿ ಹೋಂ ಕ್ವಾರಂಟೈನ್‌ನಲ್ಲಿ ಚಿಕಿತ್ಸೆ ನೀಡಿರುವುದು ಸೇರಿದಂತೆ ಹಲವು ಕಠಿಣ ನಿರ್ಧಾರಗಳು ಕೈಗೊಂಡ ಹಿನ್ನೆಲೆಯಲ್ಲಿ ಜಿಲ್ಲೆಯಲ್ಲಿ ಕೊರೊನಾ ಪಾಸಿಟಿವ್ ಪ್ರಕರಣಗಳು ಪತ್ತೆಯಾಗಿಲ್ಲ.

ಜಿಲ್ಲೆಯಲ್ಲಿ ಇಲ್ಲಿಯವರೆಗೆ 183 ವಿದೇಶದಿಂದ ಆಗಮಿಸಿದವರು ಸೇರಿದಂತೆ 760 ಜನರು ಹೋಂ ಕ್ವಾರಂಟೈನ್ ಅವಧಿ 14 ದಿನ ಪೂರ್ಣಗೊಂಡಿದ್ದು ಯಾರಲ್ಲಿಯೂ ಕೊರೊನಾ ಸೋಂಕು ಕಂಡುಬಂದಿಲ್ಲ.



Share this Story:

Follow Webdunia kannada

ಮುಂದಿನ ಸುದ್ದಿ

ತಬ್ಲಿಘಿಗಳಿಂದ ಕೊರೊನಾ ಹಾಟ್ ಸ್ಪಾಟ್ ಆದ ನಗರ