Select Your Language

Notifications

webdunia
webdunia
webdunia
webdunia

ಲಾಕ್ ಡೌನ್ ನಿಭಾಯಿಸೋಕೆ ಸಲಹೆ ಕೊಟ್ಟ ಹೆಚ್.ಡಿ.ದೇವೇಗೌಡರು

ಲಾಕ್ ಡೌನ್ ನಿಭಾಯಿಸೋಕೆ ಸಲಹೆ ಕೊಟ್ಟ ಹೆಚ್.ಡಿ.ದೇವೇಗೌಡರು
ಹಾಸನ , ಸೋಮವಾರ, 13 ಏಪ್ರಿಲ್ 2020 (19:10 IST)
ಕೊರೊನಾ ವೈರಸ್ ನಿಯಂತ್ರಣಕ್ಕೆ ಲಾಕ್ ಡೌನ್ ಜಾರಿಯಲ್ಲಿರೋದ್ರಿಂದ ಮಾಜಿ ಪ್ರಧಾನಿ ಕೆಲವು ಸಲಹೆ ನೀಡಿದ್ದಾರೆ.

ಮಾಜಿ ಪ್ರಧಾನಿ ಹೆಚ್.ಡಿ ದೇವೇಗೌಡ ಅವರು ಹಾಸನ ಜಿಲ್ಲಾಧಿಕಾರಿ ಕಚೇರಿಯಲ್ಲಿ ಲೋಕಸಭಾ ಸದಸ್ಯ ಪ್ರಜ್ವಲ್ ರೇವಣ್ಣ  ಅಧ್ಯಕ್ಷತೆಯಲ್ಲಿ ನಡೆದ ಅಧಿಕಾರಿಗಳ ಸಭೆಯಲ್ಲಿ ಪಾಲ್ಗೊಂಡು ಕೊರೊನಾ ಲಾಕ್‍ಡೌನ್ ಸಮಸ್ಯೆಯಿಂದ ಸಂಕಷ್ಟಕ್ಕೆ ಒಳಗಾದ ಜನರ ಸಮಸ್ಯೆ ಬಗೆಹರಿಸಲು ಜಿಲ್ಲಾಡಳಿತಕ್ಕೆ ಹಲವು ಸಲಹೆಗಳನ್ನು ನೀಡಿದರು.

ಜನ ಸಾಮಾನ್ಯರು ಹಾಗೂ ರೈತಾಪಿ ಜನರ ಬದುಕು ತೊಂದರೆಗೆ ಸಿಲುಕಿದೆ ಕೂಲಿ ಕಾರ್ಮಿಕರು, ಬೀದಿ ಬದಿ ವ್ಯಾಪಾರಿಗಳು ಬಡ ಕುಟುಂಬಗಳು ಕೆಲಸ ಇಲ್ಲದೇ ಕಂಗಾಲಾಗಿವೆ. ವರ ಜೀವನಕ್ಕೆ  ನೆರವಾಗಿ ಆತ್ಮವಿಶ್ವಾಸ ತುಂಬುವ ಕೆಲಸ ಮಾಡಬೇಕು ಎಂದು ಮಾಜಿ ಪ್ರಧಾನಿ ಹೇಳಿದ್ದಾರೆ.

ಅಕ್ಕಿ, ಗೋಧಿ, ಬೆಳೆ ಜೊತೆಗೆ ತೀವ್ರ ಬಡತನ ಎದುರಿಸುತ್ತಿರುವವರಿಗೆ ಇತರ ದಿನಬಳಕೆ ಸಾಮಗ್ರಿ ವಿತರಿಸಬೇಕು. ರೈತರ ಉತ್ಪಾದನೆಗಳು ಹಾಳಾಗದಂತೆ ಸೂಕ್ತ ಸಾಗಾಟದ ವ್ಯವಸ್ಥೆ ಮತ್ತು ಮಾರುಕಟ್ಟೆ ಒದಗಿಸಬೇಕು ಎಂದು ಹೆಚ್.ಡಿ. ದೇವೇಗೌಡ ಸಲಹೆ ನೀಡಿದ್ದಾರೆ.



Share this Story:

Follow Webdunia kannada

ಮುಂದಿನ ಸುದ್ದಿ

ರಾಜ್ಯದ ಈ ಜಿಲ್ಲೆಗೆ ಕಾಲಿಡೋಕೆ ಹೆದರ್ತಿದೆ ಕೊರೊನಾ ವೈರಸ್