Publish Date: Mon, 13 Apr 2020 (18:04 IST)
Updated Date: Mon, 13 Apr 2020 (18:05 IST)
ಪ್ರಶ್ನೆ : ನಾನು ಸಾಧಾರಣ ಕುಟುಂಬದಿಂದ ಬಂದವಳು. ಗಂಡ ಖಾಸಗಿ ಉದ್ಯೋಗಿಯಾಗಿದ್ದಾನೆ. ನನಗೆ ಈಗ 28 ವರ್ಷಗಳು. ನನ್ನ ಗಂಡನ ಜೊತೆಗೆ ನಾನು ದೀರ್ಘವಾಗಿ ಲೈಂಗಿಕ ಕ್ರಿಯೆ ನಡೆಸಬೇಕು ಎಂದುಕೊಳ್ಳುತ್ತೇನೆ.
ಆದರೆ ಗಂಡ ಸರಿಯಾಗಿ ಸ್ಪಂದನೆ ಮಾಡೋದೇ ಇಲ್ಲ. ನನಗಿಂತಲೂ ನಿನಗೆ ಅದರ ಚಟ ಜಾಸ್ತಿ ಇದೆ ಅಂತೆಲ್ಲಾ ಒಮ್ಮೊಮ್ಮೆ ಹೀಯಾಳಿಸಿ ಮಾತನಾಡುತ್ತಾರೆ. ನನಗೆ ಈ ವಯಸ್ಸಲ್ಲಿ ಕಾಮದಾಸೆ ಬರೋದಾ ತಪ್ಪಾ?
ಸಲಹೆ : ವಯೋಸಹಜವಾಗಿ ಕಾಮದ ಹಂಬಲ ಆರೋಗ್ಯಕರ ಗಂಡು – ಹೆಣ್ಣಿನಲ್ಲಿ ಇದ್ದೇ ಇರುತ್ತದೆ. ಅವರವರ ಜೀವನಕ್ರಮ ಅನುಸರಿಸಿ ಮೂಡ್ ಅವಧಿ ಬದಲಾಗಬಹುದೇ ಹೊರತು, ಆಸಕ್ತಿ ಎಲ್ಲರಲ್ಲೂ ಇರುತ್ತದೆ. ಸಾಮಾನ್ಯವಾಗಿ 27 ರಿಂದ 32 ವರ್ಷದ ನಡುವಿನ ಈ ಐದು ವರ್ಷಗಳಲ್ಲಿ ಮಹಿಳೆಯರು ತುಸು ಹೆಚ್ಚಿಗೆ ಲೈಂಗಿಕಾಸಕ್ತಿ ತೋರಿಸುತ್ತಾರೆ ಎನ್ನೋದನ್ನು ಕೆಲವು ವರದಿಗಳು ಹೇಳಿವೆ.
ಹೀಗಾಗಿ ನಿಮ್ಮ ಗುರಿ, ಆಸೆ ಕುರಿತು ಗಂಡನಿಗೆ ನೇರವಾಗಿ, ನಯವಾಗಿ ತಿಳಿಹೇಳಿ. ಕಾಮದ ಸನ್ನಿವೇಶ ನಿರ್ಮಾಣವಾಗುವಂತೆ ಮಾಡಿ ಮುಂದುವರಿಯಿರಿ.