Select Your Language

Notifications

webdunia
webdunia
webdunia
webdunia

ಇರುಮುಡಿ ರೂಪದಲ್ಲಿ ದತ್ತಪೀಠಕ್ಕೆ ತೆರಳಲಿರುವ ದತ್ತಭಕ್ತರ ಸಿದ್ಧತೆ

ಇರುಮುಡಿ ರೂಪದಲ್ಲಿ ದತ್ತಪೀಠಕ್ಕೆ ತೆರಳಲಿರುವ ದತ್ತಭಕ್ತರ ಸಿದ್ಧತೆ
ಚಿಕ್ಕಮಗಳೂರು , ಶುಕ್ರವಾರ, 21 ಡಿಸೆಂಬರ್ 2018 (14:33 IST)
ಡಿ. 13ರಂದು ನಡೆಯಲಿರುವ ದತ್ತಜಯಂತಿ ಹಿನ್ನಲೆ ಇರುಮುಡಿ ರೂಪದಲ್ಲಿ ದತ್ತಪೀಠಕ್ಕೆ ತೆರಳಲು ದತ್ತ ಭಕ್ತರು ಸಿದ್ಧತೆ ನಡೆಸುತ್ತಿದ್ದಾರೆ.

ದತ್ತ ಜಯಂತಿ ಹಿನ್ನೆಲೆಯಲ್ಲಿ ಚಿಕ್ಕಮಗಳೂರು ನಗರದಲ್ಲಿ ಪಡಿ ಸಂಗ್ರಹ ಮಾಡಲಾಯಿತು. ದತ್ತಮಾಲಾಧಾರಿಯಾಗಿರುವ ಶಾಸಕ ಸಿ.ಟಿ.ರವಿ ಹಾಗೂ  ಮಾಲಾಧಾರಿಗಳಿಂದ ಪಡಿ ಸಂಗ್ರಹ ನಡೆಯಿತು. ಬಸನಹಳ್ಳಿ ಮುಖ್ಯ ರಸ್ತೆ, ರಾಘವೇಂದ್ರ ಮಠದ ರಸ್ತೆಯಲ್ಲಿ ಮನೆ ಮನೆಗೆ ತೆರಳಿ ಭಿಕ್ಷಾಟನೆ ಮೂಲಕ ಪಡಿ ಸಂಗ್ರಹಿಸಲಾಯಿತು.

ಭಿಕ್ಷಾಟನೆ ಮೂಲಕ ಪಡಿಸಂಗ್ರಹಕ್ಕೆ ಅಗಮಿಸಿದ ದತ್ತಭಕ್ತರಿಗೆ ಅಕ್ಕಿ, ಬೆಲ್ಲ ವಿಳ್ಯದೇಲೆಯನ್ನು ಜನರು ನೀಡಿದರು.  
ನಾಳೆ ಇರುಮುಡಿ ರೂಪದಲ್ಲಿ ದತ್ತಪೀಠಕ್ಕೆ ತೆರಳಲಿರುವ ದತ್ತಭಕ್ತರು, ಇಂದು ಭಿಕ್ಷಾಟನೆ ಮಾಡಿದರು.
ದತ್ತಾತ್ರೇಯ ಸ್ವಾಮಿ ಭಜನೆ ಮೂಲಕ ಶಾಸಕ ಸಿ.ಟಿ.ರವಿ ಸೇರಿದಂತೆ ದತ್ತಭಕ್ತರಿಂದ ಭಿಕ್ಷಾಟನೆ ನಡೆಯಿತು.



Share this Story:

Follow Webdunia kannada

ಮುಂದಿನ ಸುದ್ದಿ

ಆಂಧ್ರಗಡಿಯಲ್ಲಿ ಜೋರಾದ ಕೆಜಿಎಫ್ ಹವಾ!