Publish Date: Wed, 04 Dec 2019 (20:30 IST)
Updated Date: Wed, 04 Dec 2019 (20:31 IST)
ಹಾಡಹಗಲೇ ಬಾಲಕನೊಬ್ಬನ ಅಪಹರಣಕ್ಕೆ ಯತ್ನಿಸಿದ ದುಷ್ಕರ್ಮಿಗಳು ಸಾರ್ವಜನಿಕರ ಕೈಗೆ ಸಿಕ್ಕಿಬಿದ್ದ ಘಟನೆ ನಡೆದಿದೆ.
ಬೆಳಗಾವಿ ಜಿಲ್ಲೆಯ ಅಥಣಿ ಪಟ್ಟಣದಲ್ಲಿ ಈ ಘಟನೆ ನಡೆದಿದೆ.
ರಾಯಭಾಗ ತಾಲೂಕಿನ ಮುಗಳಕೋಡ ಗ್ರಾಮದ ಏಳು ವರ್ಷದ ಅಪ್ರಾಪ್ತ ಬಾಲಕನಿಗೆ ಮದ್ಯ ಕುಡಿಸಿ, ಅಸ್ವಸ್ಥಗೊಂಡ ಆತನನ್ನು ಮುವತ್ತು ಕಿಲೋ ಮೀಟರ್ ದೂರದ ಅಥಣಿ ಪಟ್ಟಣಕ್ಕೆ ಕರೆತರಲಾಗಿತ್ತು. ಯಾವ ಉದ್ದೇಶಕ್ಕಾಗಿ ಬಾಲಕನ ಅಪಹರಣಕ್ಕೆ ಯತ್ನಿಸಲಾಗಿದೆ ಅನ್ನೋದು ಪೊಲೀಸರ ತನಿಖೆಯಿಂದಷ್ಟೇ ತಿಳಿದು ಬರಬೇಕಾಗಿದೆ.
ಸಂಶಯಗೊಂಡು ಆರೋಪಿಗಳನ್ನು ಹಿಡಿದು ಸಾರ್ವಜನಿಕರು ವಿಚಾರಿಸಿದಾಗ ಪರಾರಿಯಾಗಲು ಯತ್ನಿಸಿದ ಇಬ್ಬರನ್ನು ಸಾರ್ವಜನಿಕರೇ ಹಿಡಿದು ಪೊಲೀಸರಿಗೆ ಒಪ್ಪಿಸಿದ್ದಾರೆ. ಬೀದರ ಜಿಲ್ಲೆಯ ಬಾಲ್ಕಿ ತಾಲೂಕಿನ ವಿಷ್ಣಪ್ಪ ಹತ್ತಿಹಾಳ ಹಾಗೂ ಗುಲ್ಬರ್ಗ ಮೂಲದ ವಿಶ್ವನಾಥ ಪಾಟೀಲ ಇಬ್ಬರನ್ನೂ ಅಥಣಿ ಪೊಲೀಸರು ವಶಕ್ಕೆ ಪಡೆದು ತನಿಖೆ ನಡೆಸುತ್ತಿದ್ದಾರೆ.