Select Your Language

Notifications

webdunia
webdunia
webdunia
webdunia

ಚಾಕೋಲೇಟ್ ಕೊಡಿಸುವುದಾಗಿ ಅಪ್ರಾಪ್ತೆಯನ್ನು ಕರೆದೊಯ್ದು ಆತ ಮಾಡಿದ್ದೇನು ಗೊತ್ತಾ?

ಚಾಕೋಲೇಟ್ ಕೊಡಿಸುವುದಾಗಿ ಅಪ್ರಾಪ್ತೆಯನ್ನು ಕರೆದೊಯ್ದು ಆತ ಮಾಡಿದ್ದೇನು ಗೊತ್ತಾ?
ಕಲಬುರಗಿ , ಮಂಗಳವಾರ, 3 ಡಿಸೆಂಬರ್ 2019 (11:44 IST)
ಕಲಬುರಗಿ : ಶಾಲೆಯಿಂದ ಮರಳುತ್ತಿದ್ದ 8 ವರ್ಷದ ಬಾಲಕಿಗೆ, ಕಾಮುಕನೊಬ್ಬ ಚಾಕೋಲೇಟ್ ಆಸೆ ತೋರಿಸಿ ಕರೆದುಕೊಂಡು ಹೋಗಿ ಅತ್ಯಾಚಾರ ಎಸಗಿ ಬರ್ಬರವಾಗಿ ಕೊಲೆ ಮಾಡಿದ ಘಟನೆ ಕಲಬುರಗಿ ಜಿಲ್ಲೆಯ ಚಿಂಚೋಳಿ ತಾಲೂಕಿನ ಯಕಾಪುರ ಗ್ರಾಮದಲ್ಲಿ ನಡೆದಿದೆ.



ಯಲ್ಲಪ್ಪ(35) ಅತ್ಯಾಚಾರ ಎಸಗಿ ಕೊಲೆ ಮಾಡಿದ ಕಾಮುಕ. ಬಾಲಕಿ ಶಾಲೆಯಿಂದ ಮನೆಗೆ ಬರುತ್ತಿರುವಾಗ  ಚಾಕೋಲೇಟ್ ಕೊಡಿಸುವುದಾಗಿ ಹೇಳಿ ಕರೆದುಕೊಂಡು ಹೋಗಿ ಅತ್ಯಾಚಾರ ಎಸಗಿದ್ದಾನೆ, ಬಳಿಕ ಆಕೆಯನ್ನು ಕೊಂದು ಶವವನ್ನು ಗ್ರಾಮದ ಹೊರಗೆ ಎಸೆದಿದ್ದಾನೆ.


ಬಾಲಕಿ ಮನೆಗೆ ಬಾರದ ಹಿನ್ನಲೆಯಲ್ಲಿ ಪೋಷಕರು ಪೊಲೀಸರಿಗೆ ದೂರು ನೀಡಿದ್ದು, ಹುಡುಕಾಟ ನಡೆಸಿದ ಪೊಲೀಸರಿಗೆ ಬಾಲಕಿಯ ಶವ ಸಿಕ್ಕಿದ್ದು, ಅನುಮಾನದಿಂದ ಯಲ್ಲಪ್ಪನನ್ನು ವಿಚಾರಿಸಿದಾಗ ಆತ ತಾನೇ ಕೊಲೆ ಮಾಡಿರುವುದಾಗಿ ಬಾಯ್ಬಿಟ್ಟಿದ್ದಾನೆ. ಈ ಹಿನ್ನಲೆಯಲ್ಲಿ ಆ ಗ್ರಾಮದಲ್ಲಿ ಬಿಗುವಿನ ವಾತಾವರಣ ನಿರ್ಮಾಣವಾಗಿದೆ.


Share this Story:

Follow Webdunia kannada

ಮುಂದಿನ ಸುದ್ದಿ

ಉಪಚುನಾವಣೆಯ ಹಿನ್ನಲೆ; ಇಂದು ಬಹಿರಂಗ ಪ್ರಚಾರಕ್ಕೆ ತೆರೆ