Publish Date: Tue, 03 Dec 2019 (11:03 IST)
Updated Date: Tue, 03 Dec 2019 (11:06 IST)
ನವದೆಹಲಿ: ಮಹಿಳೆಯರ ಮೇಲೆ ನಡೆಯುತ್ತಿರುವ ಅತ್ಯಾಚಾರ, ಅಮಾನುಷ ಕೊಲೆ ಪ್ರಕರಣಕ್ಕೆ ಪಾಠವಾಗುವ ರೀತಿಯಲ್ಲಿ ದೆಹಲಿಯ ನಿರ್ಭಯಾ ಅತ್ಯಾಚಾರ ಆರೋಪಿಗಳಿಗೆ ಗಲ್ಲು ಶಿಕ್ಷೆ ಸದ್ಯದಲ್ಲೇ ಜಾರಿಯಾಗಲಿದೆ.
2012 ರಲ್ಲಿ ನಡೆದಿದ್ದ ನಿರ್ಭಯಾ ಗ್ಯಾಂಗ್ ರೇಪ್ ಪ್ರಕರಣ ಇಡೀ ದೇಶವನ್ನೇ ತಲ್ಲಣಗೊಳಿಸಿತ್ತು. ಈ ಪ್ರಕರಣದ ಆರೋಪಿಗಳಿಗೆ ಗಲ್ಲು ಶಿಕ್ಷೆ ವಿಧಿಸಲಾಗಿತ್ತು.
ಈ ಶಿಕ್ಷೆ ಇನ್ನು ಒಂದು ತಿಂಗಳ ಬಳಿಕ ಜಾರಿಯಾಗುವ ಸಾಧ್ಯತೆಯಿದೆ. ಸದ್ಯಕ್ಕೆ ಆರೋಪಿಗಳು ತಿಹಾರ್ ಜೈಲ್ ನಲ್ಲಿದ್ದು, ಅಲ್ಲಿಯೇ ಗಲ್ಲು ಶಿಕ್ಷೆ ಜಾರಿಯಾಗಲಿದೆ. ಆದರೆ ಸದ್ಯಕ್ಕೆ ಇವರನ್ನು ಗಲ್ಲಿಗೇರಿಸುವ ತಜ್ಞರು ಇಲ್ಲ ಎನ್ನುವುದೇ ಜೈಲು ಅಧಿಕಾರಿಗಳ ಆತಂಕಕ್ಕೆ ಕಾರಣವಾಗಿದೆ. ಇದೇ ಜೈಲ್ ನಲ್ಲಿ ಉಗ್ರ ಅಫ್ಜಲ್ ಗುರುವಿಗೆ ಕೊನೆಯದಾಗಿ ಗಲ್ಲು ಶಿಕ್ಷೆ ಜಾರಿ ಮಾಡಲಾಗಿತ್ತು. ಇದಾದ ಬಳಿಕ ಇಲ್ಲೀಗ ನಿರ್ಭಯಾ ರೇಪ್ ಪ್ರಕರಣದ ಆರೋಪಿಗಳಿಗೆ ಗಲ್ಲು ಶಿಕ್ಷೆ ಜಾರಿಯಾಗಲಿದೆ.