Publish Date: Sat, 24 Sep 2022 (21:18 IST)
Updated Date: Sat, 24 Sep 2022 (21:22 IST)
ಇದೇ 30 ರಂದು ಭಾರತ ಜೋಡೋ ಯಾತ್ರೆ ಕರ್ನಾಟಕಕ್ಕೆ ಎಂಟ್ರಿ ಕೊಡುತ್ತಿದೆ.ಎಐಸಿಸಿ ಮಾಜಿ ಅಧ್ಯಕ್ಷ ರಾಹುಲ್ ಗಾಂಧಿ ನೇತೃತ್ವದಲ್ಲಿ ನಡೆಯುತ್ತಿರುವ ಈ ಯಾತ್ರೆ ಇನ್ನೆನು ಕೆಲವೇ ದಿನಗಳಲ್ಲಿ ರಾಜ್ಯಕ್ಕೆ ಬರಲಿದೆ.ರಾಯಲ್ ಗಾಂಧಿಗೆ ಗ್ರ್ಯಾಂಡ್ ವೆಲ್ ಕಮ್ ಮಾಡಲು ರಾಜ್ಯ ಕಾಂಗ್ರೆಸ್ ನಾಯಕರು ಸರ್ಜರಿ ತಯಾರಿ ನಡೆಸುತಿದ್ದಾರೆ.ಈ ಕುರಿತು ಸಂಸದ ಡಿಕೆ ಸುರೇಶ್ ನಿವಾಸದಲ್ಲಿ ಭಾರತ ಜೋಡೋ ಯಾತ್ರೆ ಕುರಿತು ಪೂರ್ವ ಭಾವಿ ತಯಾರಿ ಸಭೆ ನಡೆಸಲಾಯ್ತು.ಭಾರತ ಜೋಡೋ ವಿವಿಧ ಕಮಿಟಿಗಳ ಮುಖ್ಯಸ್ಥರು ಈ ಸಭೆಯಲ್ಲಿ ಭಾಗವಹಿಸಿದ್ದರು. ರಾಜ್ಯಕ್ಕೆ ರಾಹುಲ್ ಗಾಂಧಿ ಎಂಟ್ರಿ ಗ ಕೆಪಿಸಿಸಿ ನಾಯಕರು ಯಾವ ರೀತಿ ತಯಾರಿ ಮಾಡಿದ್ದಾರೆ ಎಂದು ಈ ಕಮಿಟಿ ಇಂದು ವರದಿ ಸಂಗ್ರಹ ಮಾಡಿದೆ.