Select Your Language

Notifications

webdunia
webdunia
webdunia
webdunia

ಮನೆ ಬ್ರೋಕರ್ ಗಳಿಗೆ ಪತ್ರ ಕೊಡುವ ಮುನ್ನ ಎಚ್ಚರ ...!!!

ಮನೆ ಬ್ರೋಕರ್ ಗಳಿಗೆ ಪತ್ರ ಕೊಡುವ ಮುನ್ನ ಎಚ್ಚರ ...!!!
ಬೆಂಗಳೂರು , ಶನಿವಾರ, 24 ಸೆಪ್ಟಂಬರ್ 2022 (17:01 IST)
ನಿಮ್ಮ ಪ್ರಾಪರ್ಟಿಯನ್ನ ಮಾರಾಟ ಮಾಡಿ ವಂಚನೆ ಮಾಡುವ ಗ್ಯಾಂಗ್ ಒಂದು ಸಿಲಿಕಾನ್ ಸಿಟಿ ಬೆಂಗಳೂರಿನಲ್ಲಿ ಪತ್ತೆಯಾಗಿದೆ. ಹೆಚ್​ಎಸ್​ಆರ್ ಲೇಔಟ್ ನಲ್ಲಿ ಪ್ರಾಪರ್ಟಿ ಹೊಂದಿದ್ದ 76 ವರ್ಷದ ಕೃಷ್ಣಾರೆಡ್ಡಿ ಎಂಬುವವರು ವಂಚನೆಗೆ ಒಳಗಾಗಿದ್ದಾರೆ.
ಮಾಲೀಕನಾ ಹೆಸರು ವಂಚಕನ ಹೆಸರು ಒಂದೇ ಇದಿದ್ದರಿಂದ ವಂಚನೆ ಮಾಡೋದಕ್ಕೆ ಮತ್ತಷ್ಟು ಸುಲಭವಾಗಿದೆ. ಸದ್ಯ ಈಗ ವಂಚನೆಗೆ ಒಳಗಾದ ಕೃಷ್ಣಾರೆಡ್ಡಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದು ಪೊಲೀಸರು ಇಬ್ಬರನ್ನು ಬಂಧಿಸಿದ್ದಾರೆ.
 
ವಂಚನೆಗೆ ಒಳಗಾದ ಕೃಷ್ಣರೆಡ್ಡಿಗೆ ಪರಿಚಯವಾಗಿದ್ದ ಬ್ಯಾಂಕ್ ನಲ್ಲಿ ಕೆಲಸ ಮಾಡುತ್ತಿದ್ದ ವಂಚಕ ಕೃಷ್ಣಾ ರೆಡ್ಡಿ ಎಂಬುವವನು ಪ್ರಾಪರ್ಟಿ ಮೇಲೆ ಲೋನ್ ತೆಗೆದುಕೊಳ್ಳುವ ಸಲುವಾಗಿ ಜೆರಾಕ್ಸ್ ದಾಖಲೆಗಳನ್ನ ನೀಡಿದ್ದ. ಆ ಎಲ್ಲಾ ದಾಖಲೆಗಳನ್ನ ಬ್ಯಾಂಕ್ ಎಂಪ್ಲಾಯ್ ಕೃಷ್ಣಾರೆಡ್ಡಿ ವಂಚಕ ನಾಗರಾಜ್ ಗೆ ನೀಡಿದ್ದ. ಬಳಿಕ ಆ ದಾಖಲೆಗಳನ್ನ ಒರಿಜಿನಲ್ ರೀತಿ ಮಾಡಿ ಆರೋಪಿ ನಾಗರಾಜ್ ಮಾರಾಟ ಮಾಡಿದ್ದಾನೆ. ಇಂಜಿನಿಯರ್ ದಿಲೀಪ್ ಕುಮಾರ್ ಎಂಬುವವರಿಗೆ ಕೃಷ್ಣಾ ರೆಡ್ಡಿಯವರ ಹೆಚ್​ಎಸ್​ಆರ್ ಲೇಔಟ್ ನ ಪ್ರಾಪರ್ಟಿ ಮಾರಿದ್ದಾನೆ.
 
ನಾಗರಾಜ್ ನೀಡಿದ್ದ ದಾಖಲೆಗಳೆಲ್ಲವೂ ಒರಿಜಿನಲ್ ಎಂದು ತಿಳಿದು ದಿಲೀಪ್ ಪ್ರಾಪರ್ಟಿ ಖರೀದಿ ಮಾಡಿದ್ದಾರೆ. ಬಳಿಕ ವಂಚನೆ ಬೆಳಕಿಗೆ ಬಂದಿದ್ದು, ಆಶೋಕ್ ನಗರ ಪೊಲೀಸ್ ಠಾಣೆಗೆ ಅಧಿಕಾರಿಗಳು ದೂರು ನೀಡಿದ್ರು. ಅಶೋಕ್ ನಗರ ಪೊಲೀಸರು 76 ವರ್ಷದ ವೃದ್ಧ ಕೃಷ್ಣಾ ರೆಡ್ಡಿಯನ್ನ ಪ್ರಕರಣ ಸಂಬಂಧ ಭೇಟಿ ಮಾಡಿದ್ರು. ಪೊಲೀಸರು ಮನೆಗೆ ಬಂದಾಗಲೇ ಕೃಷ್ಣರೆಡ್ಡಿ ವಂಚನೆಗೆ ಒಳಗಾಗಿರೋದು ಗೊತ್ತಾಗಿದೆ. ತಕ್ಷಣವೇ ಹೆಚ್​ಎಸ್​ಆರ್ ಪೊಲೀಸ್ ಠಾಣೆಗೆ ವೃದ್ಧ ಕೃಷ್ಣ ರೆಡ್ಡಿ ದೂರು ನೀಡಿದ್ದಾರೆ. ಪೊಲೀಸರು ಪ್ರಕರಣ ಸಂಬಂಧ ಇಬ್ಬರನ್ನ ಬಂಧಿಸಿ ವಿಚಾರಣೆ ನಡೆಸುತ್ತಿದ್ದಾರೆ.

Share this Story:

Follow Webdunia kannada

ಮುಂದಿನ ಸುದ್ದಿ

ತಾಯಿ ಅಗಳಿಕೆಯಲ್ಲು 3 ದಿನ ಕರ್ತವ್ಯ ಹಾಜರಾದ ಖಾಕಿ