Select Your Language

Notifications

webdunia
webdunia
webdunia
webdunia

ಇವತ್ತು ಕೂಡ ಮುಂದುವರೆದ ಪೇ ಸಿಎಂ ಅಭಿಯಾನ

ಇವತ್ತು ಕೂಡ ಮುಂದುವರೆದ ಪೇ ಸಿಎಂ ಅಭಿಯಾನ
bangalore , ಶನಿವಾರ, 24 ಸೆಪ್ಟಂಬರ್ 2022 (21:12 IST)
ಪೋಸ್ಟರ್ ಅಂಟಿಸಿ ಬಿಜಿಪಿ ಸರ್ಕಾರದ ವಿರುದ್ದ ಆಕ್ರೋಶ ಹೊರಹಾಕಲಾಗಿದೆ.ಮಹಾಲಕ್ಷ್ಮಿ ಲೇಔಟ್ ನಲ್ಲಿ ಕಾಂಗ್ರೆಸ್ ಕಾರ್ಯಕರ್ತರು ಪೇ ಸಿಎಂ ಪೋಸ್ಟರ್ ಅಂಟಿಸಿದಾರೆ.
 
ಮಹಾಲಕ್ಷ್ಮಿ ಲೇಔಟ್ ಬಸ್ ನಿಲ್ದಾಣದಲ್ಲಿ ಕೈ ಕಾರ್ಯಕರ್ತರು ಪೋಸ್ಟರ್ ಅಂಟಿಸಿದಾರೆ.ಕಾಂಗ್ರೆಸ್ ಬ್ಲಾಕ್ ಸಮಿತಿ ಸದಸ್ಯರಿಂದ ಪೋಸ್ಟರ್ ಅಂಟಿಸಿ, ಜನರಿಗೆ ಬಿತ್ತಿಪತ್ರಗಳ ವಿತರಣೆ ಮಾಡಿದ್ದಾರೆ.ಅಷ್ಟೇ ಅಲ್ಲದೆ BMTC ಬಸ್ ಗೂ ಕೈ ಕಾರ್ಯಕರ್ತರು ಪೋಸ್ಟರ್ ಅಂಟಿಸಿದಾರೆ.ಇನ್ನೂ ಪ್ರತಿಭಟನೆ ತೀವ್ರ ಸ್ವರೂಪ ಪಡೆಯುತ್ತಿದ್ದಂತೆ ಸ್ಥಳಕ್ಕೆ ಪೊಲೀಸರು ಬಂದಿದ್ದಾರೆ.
 
 ಇನ್ನೂ ಸ್ಥಳಕ್ಕೆ  ಎಸಿಪಿ ಎಂ ಪ್ರವೀಣ್ ಆಗಮಿಸಿದ್ದಾರೆ.ಜೊತೆಗೆ ಹಿರಿಯ ಪೊಲೀಸ್ ಅಧಿಕಾರಿಗಳಿಗೂ ಪೋಸ್ಟರ್ ಅಂಟಿಸುವ ಬಗ್ಗೆ ಮಾಹಿತಿ ರವಾನೆಯಾಗಿದೆ.ಕೈ ಕಾರ್ಯಕರ್ತರು ಪೊಲೀಸರ ಮುಂದೆಯೇ ಪೋಸ್ಟರ್ ಅಂಟಿಸಿದಾರೆ.ಸ್ಥಳದಲ್ಲಿ ಪೋಸ್ಟರ್ ಅಂಟಿಸಿದ್ದನ್ನ ತಡೆಯದ ಪೊಲೀಸರ ವಿರುದ್ದ ಹಿರಿಯ ಪೊಲೀಸ್ ಅಧಿಕಾರಿಗಳು ಫುಲ್ ಗರಂ ಆಗಿದ್ದಾರೆ.ಇನ್ನೂ ಸ್ಥಳಕ್ಕೆ ಎಸಿಪಿ, ಇನ್ಸ್ಪೆಕ್ಟರ್, ಸಬ್ ಇನ್ಸ್ಪೆಕ್ಟರ್ ಗಳು ಬಂದು ದೊಡ್ಡ ರಂಪಾಟವೇಯಾಗಿದೆ.

Share this Story:

Follow Webdunia kannada

ಮುಂದಿನ ಸುದ್ದಿ

ಪೆಟ್ರೋಲ್ ಬಂಕ್ ನಲ್ಲಿ ಮೋಸ ಮಾಡ್ತಿದರೆಂದು ರೊಚ್ಚಿಗೆದ್ದ ಗ್ರಾಹಕರು