Publish Date: Fri, 04 May 2018 (09:37 IST)
Updated Date: Fri, 04 May 2018 (09:38 IST)
ಬೆಂಗಳೂರು: ಪ್ರಧಾನಿ ಮೋದಿ ವಿರುದ್ಧ ಬಹುಭಾಷಾ ತಾರೆ ಪ್ರಕಾಶ್ ರೈ ಮತ್ತೊಮ್ಮೆ ವಾಗ್ದಾಳಿ ನಡೆಸಿದ್ದಾರೆ. ಮೋದಿ ಸುಳ್ಳುಗಾರ ಎಂದು ಜರೆದಿದ್ದಾರೆ.
ಹಾಸನದಲ್ಲಿ ಸಂವಿಧಾನ ಉಳಿಸಿ ಕಾರ್ಯಕ್ರಮದಲ್ಲಿ ಮಾತನಾಡಿದ ಪ್ರಕಾಶ್ ರೈ ‘ನಿಮ್ಮ ಸವಕಲು ನಾಣ್ಯದ ಮಾತುಗಳು ಕರ್ನಾಟಕದಲ್ಲಿ ನಡೆಯಲ್ಲ’ ಎಂದು ಎಚ್ಚರಿಕೆ ನೀಡಿದ್ದಾರೆ.
ಕರ್ನಾಟಕದ ಜನತೆ ನಿಮ್ಮ ಸುಳ್ಳುಗಳನ್ನು ನಂಬಲ್ಲ. ಮೋದಿಗೆ ಸುಳ್ಳು ಒಂದು ರೋಗವಿದ್ದಂತೆ ಎಂದು ಪ್ರಕಾಶ್ ರೈ ವಾಗ್ದಾಳಿ ನಡೆಸಿದ್ದಾರೆ. ಯಾವ ಮುಖ ಇಟ್ಟುಕೊಂಡು ವೋಟ ಕೇಳ್ತಿದ್ದೀರಾ? ಬಳ್ಳಾರಿ ಜನಾರ್ಧನ ರೆಡ್ಡಿಯ ಅಕ್ರಮಗಳನ್ನು ನೀವು ಕ್ಷಮಿಸಲು ಅವರೇನು ನಿಮ್ಮಪ್ಪನ ಆಸ್ತಿ ತೆಗೆದುಕೊಂಡು ಹೋಗಿದ್ದರಾ? ರೆಡ್ಡಿಯನ್ನು ಕ್ಷಮಿಸಬೇಕಾಗಿರುವುದು ನೀವಲ್ಲ, ಜನರು ಎಂದು ಕಿಡಿ ಕಾರಿದ್ದಾರೆ. ಅಷ್ಟೇ ಅಲ್ಲ ಈ ಸಂದರ್ಭದಲ್ಲಿ ಬಿಎಸ್ ಯಡಿಯೂರಪ್ಪ ವಿರುದ್ಧವೂ ಹರಿಹಾಯ್ದಿದ್ದಾರೆ.
ತಾಜಾ ಸುದ್ದಿಗಳನ್ನು ಓದಲು ವೆಬ್ ದುನಿಯಾ ಮೊಬೈಲ್ ಆಪ್ ಡೌನ್ ಲೋಡ್ ಮಾಡಿಕೊಳ್ಳಿ.