ದಾವಣಗೆರೆ : ನಾನು ಕೇಂದ್ರ ಸರ್ಕಾರದ ವಿರುದ್ಧ ಮಾತನಾಡುವೆ. ಧೈರ್ಯವಿದ್ದರೆ ನನ್ನನ್ನು ಬಂಧಿಸಲಿ ಎಂದು ಕಾಂಗ್ರೆಸ್ ಮುಖಂಡ ಸಿಎಂ ಇಬ್ರಾಹಿಂ ಅವರು ಸವಾಲ್ ಹಾಕಿದ್ದಾರೆ.
ಕಾಂಗ್ರೆಸ್ ಅಭ್ಯರ್ಥಿ ಎಸ್ ರಾಮಪ್ಪ ಪರ ಪತಯಾಚನೆ ವೇಳೆ ಬಹಿರಂಗ ಸಭೆಯಲ್ಲಿ ಮಾತನಾಡಿದ ಅವರು,’ ಸಿಎಂ ಸಿದ್ದರಾಮಯ್ಯ ಯಾರು ಎಂಬುದನ್ನು ಪ್ರಧಾನಿ ಮೋದಿ ಅವರು ಜನಾರ್ಧನ ರೆಡ್ಡಿಗೆ ಕೇಳಬೇಕು. 'ಬಳ್ಳಾರಿಯನ್ನು ಭಯ ಮುಕ್ತ ಮಾಡಿದ್ದು ಸಿದ್ದರಾಮಯ್ಯ, ನಿಜವಾದ ದಾಸೋಹಿ ಸಿದ್ದರಾಮಯ್ಯ ಅವರು 4 ಕೋಟಿ ಜನರಿಗೆ ಅನ್ನ ಭಾಗ್ಯ ನೀಡಿದ್ದಾರೆ. ಶಾಲಾ ಮಕ್ಕಳಿಗೆ ಕ್ಷೀರ ಭಾಗ್ಯ ನೀಡಿದ್ದಾರೆ’ ಎಂದು ತಿಳಿಸಿದ್ದಾರೆ.
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ
ಮೊಬೈಲ್ ಆ್ಯಪ್ ಡೌನ್ ಲೋಡ್ ಮಾಡಿಕೊಳ್ಳಿ