Select Your Language

Notifications

webdunia
webdunia
webdunia
webdunia

ಪುನೀತ್ ಹೆಸರಲ್ಲಿ ಸಮಾಜಮುಖಿ ಕೆಲಸ ಮಾಡಲು ಮುಂದಾದ ಪ್ರಕಾಶ್ ರಾಜ್

ಪುನೀತ್ ಹೆಸರಲ್ಲಿ ಸಮಾಜಮುಖಿ ಕೆಲಸ ಮಾಡಲು ಮುಂದಾದ ಪ್ರಕಾಶ್ ರಾಜ್
ಮೈಸೂರು , ಭಾನುವಾರ, 7 ಆಗಸ್ಟ್ 2022 (14:23 IST)
ಪುನೀತ್ ರಾಜ್ ಕುಮಾರ್ ನಮ್ಮನ್ನೆಲ್ಲ ಬಿಟ್ಟು ಅಗಲಿದ್ದಾರೆ. ಆದ್ರೂ ಅಪ್ಪು ಎಲ್ರ ಮನಸಲ್ಲಿ ಗಟ್ಟಿಯಾಗಿ ನೆಲೆ ನಿಂತಿದ್ದಾರೆ. ಇದೀಗ ಪ್ರಕಾಶ್ ರೈ ಫೌಂಡೇಶನ್ ಅಪ್ಪು ಸ್ಮರಣಾರ್ಥ ಹೊಸ ಸಮಾಜ ಸೇವೆಗೆ ಮುಂದಾಗಿದೆ.
ರಾಜ್ಯದ ಎಲ್ಲ ಜಿಲ್ಲೆಗಳಿಗೆ ಪುನೀತ್ ರಾಜ್​ಕುಮಾರ ಹೆಸರಿನಲ್ಲಿ ಅಪ್ಪು ಎಕ್ಸ್​ಪ್ರೆಸ್ ಆ್ಯಂಬುಲನ್ಸ್ ನೀಡಲಾಗುತ್ತಿದೆ.ಅಪ್ಪು ಹೆಸರಲ್ಲಿ ಪ್ರಕಾಶ್ ರಾಜ್ ಫೌಂಡೇಷನ್​ ವತಿಯಿಂದ ಹೊಸ ಹೆಜ್ಜೆ ಇರಿಸಲಾಗಿದ್ದು,. ಶೀಘ್ರದಲ್ಲೇ ಮೈಸೂರಲ್ಲಿ ಬ್ಲಡ್ ಬ್ಯಾಂಕ್ ಕೂಡ ನಿರ್ಮಾಣ ಮಾಡಲು ತೀರ್ಮಾನಿಸಲಾಗಿದೆ.
ಆ್ಯಂಬುಲೆನ್ಸ್​ ಸಕಾಲಕ್ಕೆ ಸಿಕ್ಕಿದ್ದರೆ ಅಪ್ಪು ಬದುಕುತ್ತಿದ್ದರೇನೋ ಎಂಬ ಸ್ಥಿತಿ ಜನ ಸಾಮಾನ್ಯರಿಗೆ ಬರಬಾರದು ಎಂಬ ಉದ್ದೇಶದಿಂದ ಪುನೀತ್ ರಾಜ್​ಕುಮಾರ ಹೆಸರಿನಲ್ಲಿ ಅಪ್ಪು ಎಕ್ಸ್​ಪ್ರೆಸ್ ಎಂಬ ಆ್ಯಂಬುಲೆನ್ಸ್ ಅನ್ನು ರಾಜ್ಯದ ಎಲ್ಲ ಜಿಲ್ಲೆಗಳಿಗೆ ಪ್ರಕಾಶ್ ರಾಜ್ ಫೌಂಡೇಷನ್ ನೀಡಲಿದೆ ಎಂದು ದಕ್ಷಿಣ ಭಾರತದ ಖ್ಯಾತ ನಟ ಪ್ರಕಾಶ್ ರಾಜ್ ತಿಳಿಸಿದರು. ನಗರದ ಪಾರಂಪರಿಕ ಶತಮಾನ ಕಂಡ ಮಿಷನ್ ಆಸ್ಪತ್ರೆಗೆ ಅಪ್ಪು ಎಕ್ಸ್​ಪ್ರೆಸ್ ಆ್ಯಂಬುಲೆನ್ಸ್​ ನೀಡಿ ಪ್ರಕಾಶ್ ರಾಜ್ ನೀಡಿ ಮಾತನಾಡಿದರು.
 
ಅಪ್ಪು ಹೆಸರಿನಲ್ಲಿ ರಾಜ್ಯದ ಎಲ್ಲ ಜಿಲ್ಲೆಗಳಿಗೂ ಅಪ್ಪು ಹೆಸರಿನಲ್ಲಿ ಉಚಿತ ಆ್ಯಂಬುಲೆನ್ಸ್ ನೀಡುವ ಕಾರ್ಯವನ್ನು ನಮ್ಮ ಫೌಂಡೇಶನ್ ಹಮ್ಮಿಕೊಂಡಿದೆ. ಈ ಕೆಲಸಕ್ಕೆ ಪುನೀತ್ ರಾಜಕುಮಾರ್ ಅವರ ಮಾನವೀಯತೆಯ ಕೆಲಸವೇ ಸ್ಫೂರ್ತಿಯಾಗಿದೆ ಎಂದು ನಟ ಹೇಳಿದರು.
ಪುನೀತ್ ಚಿಕ್ಕ ವಯಸ್ಸಿನಲ್ಲಿ ಮಾಡಿದ ಕೆಲಸ ದೊಡ್ಡದು. ಅವರ ಹೆಸರನ್ನು ಶಾಶ್ವತವಾಗಿ ಉಳಿಸುವ ಆಸೆ ನಮ್ಮದು. ಆ ದೃಷ್ಟಿಯಿಂದ ಅವರು ನಮ್ಮಲ್ಲಿ ಜೀವಂತಾಗಿ ಇರಬೇಕಾದರೆ, ಅವರು ಮಾಡಿರುವ ಒಳ್ಳೆಯ ಕೆಲಸಗಳನ್ನು ಸ್ಮರಿಸುತ್ತಾ ಕೂರದೇ ಅವುಗಳನ್ನು ನಾವು ಮುಂದುವರೆಸಿಕೊಂಡು ಹೋಗಬೇಕಾಗಿದೆ. ಆ ದೃಷ್ಟಿಯಿಂದ ಎಲ್ಲ ಜಿಲ್ಲೆಗಳಿಗೂ ಅಪ್ಪು ಎಕ್ಸ್​ಪ್ರೆಸ್ ಆ್ಯಂಬುಲೆನ್ಸ್ ನೀಡಲು ಮುಂದಾಗಿದ್ದೇವೆ ಎಂದು ನಟ ಪ್ರಕಾಶ್ ರಾಜ್ ತಿಳಿಸಿದರು .
ಆಂಬ್ಯುಲನ್ಸ್ಅಪ್ಪು ಜೊತೆ ಮೂರು ಚಿತ್ರ ಮಾತ್ರ ಮಾಡಿದ್ದರೂ ಅವರ ಜೊತೆ ಉತ್ತಮ ಒಡನಾಟ ಇತ್ತು. ಕೋವಿಡ್ ಸಂದರ್ಭದಲ್ಲಿ ಅಪ್ಪು ನನಗೆ ದೇಣಿಗೆ ರೂಪದಲ್ಲಿ ಸಹಾಯ ಮಾಡಿದ್ದರು. ಅದನ್ನು ಎಲ್ಲಿಯೂ ಹೇಳಿರಲಿಲ್ಲ. ಆ್ಯಂಬುಲೆನ್ಸ್ ಕೊಡಲು ಕಾರಣವೇನೆಂದರೆ ಅಪ್ಪುಗೆ ಸಕಾಲದಲ್ಲಿ ಆ್ಯಂಬುಲೆನ್ಸ್ ಸಿಕ್ಕಿದ್ದರೆ ಬದುಕುತ್ತಿದ್ದರೇನೋ ಎಂಬ ಮಾತು ಕೇಳಿ ಬರುತ್ತಿದ್ದು, ಇಂತಹ ಸ್ಥಿತಿ ಬಡ ಜನರಿಗೆ ಬರಬಾರದು ಎಂಬ ಉದ್ದೇಶದಿಂದ ಅಪ್ಪು ಹೆಸರಿನಲ್ಲಿ ಆ್ಯಂಬುಲೆನ್ಸ್ ನೀಡಲಾಗುತ್ತಿದೆ ಎಂದರು.
 
ಮೈಸೂರಿನ ಮಿಷನ್ ಆಸ್ಪತ್ರೆಯವರು ಬ್ಲಡ್ ಬ್ಯಾಂಕ್ ಸ್ಥಾಪನೆಗೆ ಜಾಗ ನೀಡುವುದಾಗಿ ಹೇಳಿದ್ದಾರೆ. ದಾನಿಗಳ ಸಹಾಯದಿಂದ ಎರಡು ಮೂರು ತಿಂಗಳಿನಲ್ಲಿ ಬ್ಲಡ್ ಬ್ಯಾಂಕ್ ಸ್ಥಾಪನೆ ಮಾಡಲಾಗುವುದು ಎಂದು ಇದೇ ಸಂದರ್ಭದಲ್ಲಿ ನಟ ಪ್ರಕಾಶ್ ರಾಜ್ ಹೇಳಿಕೆ ನೀಡಿದರು

Share this Story:

Follow Webdunia kannada

ಮುಂದಿನ ಸುದ್ದಿ

75 ನೇ ಸ್ವಾತಂತ್ರ್ಯ ಅಮೃತ ಮಹೋತ್ಸವದ ಪ್ರಯುಕ್ತ ಶಾಸಕರ ಕಾಲ್ನಡಿಗೆ ಜಾಥಾ..!