Select Your Language

Notifications

webdunia
webdunia
webdunia
webdunia

Prajwal Revanna ಮೊಬೈಲ್ ನಲ್ಲಿ ಅದೆಲ್ಲಾ ಇತ್ತು: ಸ್ಪೋಟಕ ವಿಚಾರಗಳು ಬಹಿರಂಗ

Prajwal Revanna

Krishnaveni K

ಹಾಸನ , ಮಂಗಳವಾರ, 27 ಮೇ 2025 (12:22 IST)
ಹಾಸನ: ಅತ್ಯಾಚಾರ, ಲೈಂಗಿಕ ದೌರ್ಜನ್ಯ ಪ್ರಕರಣದಲ್ಲಿ ಬಂಧಿತರಾಗಿರುವ ಮಾಜಿ ಸಂಸದ ಪ್ರಜ್ವಲ್ ರೇವಣ್ಣ ಮೊಬೈಲ್ ನಲ್ಲಿತ್ತು 2,000 ಹುಡುಗಿಯರ ಫೋಟೋಗಳು ಎಂಬ ಸ್ಪೋಟಕ ಅಂಶ ಈಗ ಬೆಳಕಿಗೆ ಬಂದಿದೆ.
 

ಪ್ರಜ್ವಲ್ ರೇವಣ್ಣ ವಿರುದ್ಧ ಅವರ ಮಾಜಿ ಕಾರು ಚಾಲಕ ಕಾರ್ತಿಕ್ ಕೋರ್ಟ್ ನಲ್ಲಿ ಸಾಕ್ಷ್ಯ ನುಡಿದಿದ್ದ. ಈ ವೇಳೆ ಸಾಕಷ್ಟು ಸ್ಪೋಟಕ ವಿಚಾರಗಳನ್ನು ಬಾಯ್ಬಿಟ್ಟಿದ್ದಾನೆ. 2009 ರಿಂದ ಜೆಡಿಎಸ್ ನಾಯಕ ಎಚ್ ಡಿ ರೇವಣ್ಣ ಬಳಿ ಕೆಲಸ ಮಾಡುತ್ತಿದ್ದೆ. ನಂತರ ಭವಾನಿ ರೇವಣ್ಣ, ಸೂರಜ್ ರೇವಣ್ಣನಿಗೂ ಕಾರು ಚಾಲಕನಾಗಿದ್ದೆ. 2018 ರಿಂದ ಪ್ರಜ್ವಲ್ ಗೆ ಕಾರು ಚಾಲಕನಾಗಿ ಕೆಲಸ ಮಾಡುತ್ತಿದ್ದೆ.

ಪ್ರಜ್ವಲ್ ಜೊತೆ ಕ್ಷೇತ್ರ ಸಂಚಾರ ಮಾಡುತ್ತಿದ್ದೆ. ಆಗೆಲ್ಲಾ ಪ್ರಜ್ವಲ್ ಮೊಬೈಲ್ ನಲ್ಲಿ ನೀಲಿ ಚಿತ್ರ ವೀಕ್ಷಿಸುತ್ತಿದ್ದರು. ನಾನು ಆ ಕಡೆ ನೋಡಿದರೆ ಫೋನ್ ತಿರುಗಿಸುತ್ತಿದ್ದರು. ಜಯನಗರದ ಅವರ ಗೆಳತಿ ಮನೆಗೆ ಹೋದಾಗ ಕಾರಿನಲ್ಲಿ ಮೊಬೈಲ್ ಬಿಟ್ಟು ಹೋಗಿದ್ದರು. ಅವರ ಮೊಬೈಲ್ ಪಾಸ್ ವರ್ಡ್ ನನಗೆ ಗೊತ್ತಿತ್ತು. ಹೀಗಾಗಿ ತೆಗೆದು ನೋಡಿದಾಗ ಅದರಲ್ಲಿ 2000 ಅಶ್ಲೀಲ ಫೋಟೋ, 30 ರಿಂದ 40 ಮಹಿಳೆಯರ ಅಶ್ಲೀಲ  ವಿಡಿಯೋಗಳಿದ್ದವು.

ಇದೆಲ್ಲವನ್ನೂ ಭವಾನಿಗೆ ರೇವಣ್ಣನಿಗೆ ಹೇಳೋಣ ಎಂದು ನನ್ನ ಫೋನ್ ಗೆ ವರ್ಗಾಯಿಸಿಕೊಂಡೆ. ಅದರಂತೆ ಭವಾನಿ ರೇವಣ್ಣಗೆ ಮಾಹಿತಿ ನೀಡಿದಾಗ ಅವರು ಫೋಟೋ, ವಿಡಿಯೋ ಕಳುಹಿಸಲು ಕೇಳಿದರು. ಬೇರೆಲ್ಲೂ ವಿಷಯ ಹೊರಗೆ ಬರಬಾರದು ಎಂದು ಮನವಿ ಮಾಡಿದ್ದರು. ಇದಾದ ಬಳಿಕ ಭವಾನಿ ಮತ್ತು ಪ್ರಜ್ವಲ್ ನಡುವೆ ಮಾತುಕತೆಯಿರಲಿಲ್ಲ.

ಬಳಿಕ ಪ್ರಜ್ವಲ್ ಗೆ ವಿಡಿಯೋ ನೀಡಿದ್ದು ನಾನೇ ಎಂದು ಗೊತ್ತಾಗಿ ನನಗೆ ಬೈದರು. 2022 ರಲ್ಲಿ ನಮಗೆ ಜಗಳವಾಗಿ ನಾನು ಕೆಲಸ ಬಿಟ್ಟೆ. ಆಸ್ತಿ ವಿವಾದಕ್ಕೆ ಸಂಬಂಧಿಸಿದಂತೆ ಕೇಸ್ ಹಾಕಿದ್ದೆ. ಆಸ್ತಿ ವಿವಾದ ಬಗೆಹರಿಸುತ್ತೇನೆ ಕೆಲಸಕ್ಕೆ ಬರುವಂತೆ ಕರೆದಿದ್ದರು. ಆದರೆ ವಿಡಿಯೋ ಹೊರಗೆ ಬರಬಾರದು ಎಂದು ತಡೆಯಾಜ್ಞೆ ತಂದರು. ನನ್ನನ್ನು ಪ್ರತಿವಾದಿ ಮಾಡಿದ್ದರಿಂದ ವಕೀಲ ದೇವರಾಜೇಗೌಡರನ್ನು ಸಂಪರ್ಕಿಸಿದೆ. ಅವರು ಸಾಕ್ಷಿಯಾಗಿ ಫೋಟೋ, ವಿಡಿಯೋಗಳನ್ನು ನೀಡುವಂತೆ ಕೇಳಿದಾಗ ಪೆನ್ ಡ್ರೈವ್ ನಲ್ಲಿಟ್ಟು ನೀಡಿದೆ. ಲೋಕಸಭೆ ಚುನಾವಣೆ ವೇಳೆ ಈ ಫೋಟೋ, ವಿಡಿಯೋಗಳು ಲೀಕ್ ಆದವು ಎಂದು ಡ್ರೈವರ್ ಕಾರ್ತಿಕ್ ಕೋರ್ಟ್ ಗೆ ಹೇಳಿಕೆ ನೀಡಿದ್ದಾರೆ.

Share this Story:

Follow Webdunia kannada

ಮುಂದಿನ ಸುದ್ದಿ

COVID19: ಶಾಲೆಗಳಿಗೆ ಏನು ಮಾರ್ಗಸೂಚಿ ಎಂದರೆ ಸಚಿವ ಮಧು ಬಂಗಾರಪ್ಪ ಹೇಳಿದ್ದೇನು ನೋಡಿ