ಬೆಂಗಳೂರು: ಮಹಿಳೆಯರ ಮೇಲೆ ಲೈಂಗಿಕ ದೌರ್ಜನ್ಯವೆಸಗಿದ ಆರೋಪದಲ್ಲಿ ಬಂಧಿತರಾಗಿರುವ ಮಾಜಿ ಸಂಸದ ಪ್ರಜ್ವಲ್ ರೇವಣ್ಣ ತಮಗಾಗಿ ವಕೀಲರನ್ನೂ ನೇಮಿಸಿಕೊಂಡಿಲ್ಲ. ಅವರ ಸ್ಥಿತಿ ಈಗ ಏನಾಗಿದೆ ನೋಡಿ.
ಹಾಸನ, ಬೆಂಗಳೂರಿನ ತಮ್ಮ ಮನೆಯಲ್ಲಿ ಹಲವು ಮಹಿಳೆಯರಿಗೆ ಲೈಂಗಿಕ ಕಿರುಕುಳ, ಅತ್ಯಾಚಾರವೆಸಗಿರುವ ಆರೋಪದಲ್ಲಿ ಪ್ರಜ್ವಲ್ ಹಲವು ತಿಂಗಳುಗಳಿಂದ ಜೈಲಿನಲ್ಲಿದ್ದಾರೆ. ಅವರ ಜಾಮೀನು ಅರ್ಜಿ ಹಲವು ಬಾರಿ ತಿರಸ್ಕೃತವಾಗಿದೆ. ಹೀಗಾಗಿ ಪರಪ್ಪನ ಅಗ್ರಹಾರದಲ್ಲಿ ನ್ಯಾಯಾಂಗ ಬಂಧನದಲ್ಲಿದ್ದಾರೆ.
ಇನ್ನೊಂದೆಡೆ ಅವರ ಪ್ರಕರಣದ ವಿಚಾರಣೆ ಕೋರ್ಟ್ ನಲ್ಲಿ ನಡೆಯಲಿದೆ. ಆದರೆ ತನ್ನ ಪರ ವಾದ ಮಂಡಿಸಲು ವಕೀಲರಿಲ್ಲ ಎಂದು ಪ್ರಜ್ವಲ್ ಕೋರ್ಟ್ ಗೆ ತಿಳಿಸಿದ್ದಾರೆ. ಹೀಗಾಗಿ ಈಗ ನ್ಯಾಯಾಲಯವೇ ಪ್ರಜ್ವಲ್ ಗೆ ಉಚಿತವಾಗಿ ವಕೀಲರನ್ನು ನೇಮಿಸಿಕೊಟ್ಟಿದೆ.
ಇಂದಿನಿಂದ ಪ್ರಜ್ವಲ್ ಪ್ರಕರಣದ ವಿಚಾರಣೆ ಆರಂಭವಾಗಿದೆ. ಆದರೆ ನನ್ನ ಬಳಿ ವಕೀಲರಿಲ್ಲ. ವಕೀಲರನ್ನು ನೇಮಿಸಿಕೊಳ್ಳಲು ಸಮಯ ಕೊಡಿ ಎಂದು ಪ್ರಜ್ವಲ್ ಕೇಳಿಕೊಂಡಿದ್ದಾರೆ. ಆದರೆ ಇದನ್ನು ತಿರಸ್ಕರಿಸಿರುವ ನ್ಯಾಯಾಲಯ ತಾನೇ ವಕೀಲರನ್ನು ನೇಮಿಸಿದೆ. ಮೇ 2 ರಿಂದ ಪ್ರಜ್ವಲ್ ಪ್ರಕರಣದ ಟ್ರಯಲ್ ಆರಂಭವಾಗಲಿದ್ದು, ಎರಡು ತಿಂಗಳೊಳಗಾಗಿ ವಿಚಾರಣೆ ಮುಗಿಸುವುದಾಗಿ ಕೋರ್ಟ್ ಹೇಳಿದೆ.