ಬೆಂಗಳೂರು: ನೂರಾರು ಮಹಿಳೆಯರ ಮೇಲೆ ಲೈಂಗಿಕ ದೌರ್ಜನ್ಯ ಮತ್ತು ರೇಪ್ ಕೇಸ್ ನಲ್ಲಿ ಬಂಧಿತರಾಗಿರುವ ಮಾಜಿ ಸಂಸದ ಪ್ರಜ್ವಲ್ ರೇವಣ್ಣ ಜಾಮೀನು ಅರ್ಜಿ ಇಂದು ವಿಚಾರಣೆಗೆ ಬರಲಿದೆ.
ಈಗಷ್ಟೇ ಪ್ರಜ್ವಲ್ ಪ್ರಕರಣಗಳ ತನಿಖೆ ನಡೆಸುತ್ತಿರುವ ಎಸ್ ಐಟಿ ತಂಡ ಮತ್ತೊಂದು ಚಾರ್ಜ್ ಶೀಟ್ ಸಲ್ಲಿಕೆ ಮಾಡಿತ್ತು. ಇದರಲ್ಲಿ 60 ವರ್ಷದ ವೃದ್ಧ ಮಹಿಳೆ ಮೇಲೆ ರೇಪ್ ಮಾಡಿದ ಘಟನೆ ಇಂಚಿಂಚೂ ಬಿಚ್ಚಿಡಲಾಗಿತ್ತು. ಇದನ್ನು ಓದಿ ಈಗ ಜನರೇ ಇವನೆಂಥಾ ಕಾಮುಕ ಇರಬೇಕು ಎನ್ನುತ್ತಿದ್ದಾರೆ.
ಇಂತಹ ಸಂದರ್ಭದಲ್ಲಿ ಪ್ರಜ್ವಲ್ ಸಲ್ಲಿಸಿರುವ ಜಾಮೀನು ಅರ್ಜಿ ಇಂದು ವಿಚಾರಣೆಗೆ ಬರಲಿದೆ. ಈ ನಡುವೆ ಅವರಿಗೆ ಚಾರ್ಜ್ ಶೀಟ್ ಕಾಪಿ ನೀಡಿಲ್ಲ ಎಂದು ಅವರ ಪರ ವಕೀಲರು ಕೋರ್ಟ್ ನಲ್ಲಿ ವಾದ ಮಂಡಿಸಿದ್ದರು. ಈ ಎಲ್ಲಾ ಆರೋಪಗಳ ನಡುವೆ ಪ್ರಜ್ವಲ್ ಗೆ ನ್ಯಾಯಾಲಯದಿಂದ ರಿಲೀಫ್ ಸಿಗಬಹುದೇ ಎಂಬ ಅನುಮಾನ ಕಾಡಿದೆ.
ಪ್ರಜ್ವಲ್ ಮೇಲೆ ಹಲವು ಪ್ರಕರಣಗಳಿವೆ. ಹೀಗಾಗಿ ಒಂದೊಂದೇ ಪ್ರಕರಣಗಳಿಗೆ ಸಂಬಂಧಿಸಿದಂತೆ ಜಾಮೀನು ಅರ್ಜಿ ವಿಚಾರಣೆ ನಡೆಯಲಿದೆ. ಆದರೆ ಹಲವು ಪ್ರಕರಣಗಳಲ್ಲಿ ಸಿಲುಕಿಕೊಂಡಿರುವ ಪ್ರಜ್ವಲ್ ಮೇಲೆ ಒಂದಾದ ಮೇಲೊಂದರಂತೆ ಬರುತ್ತಿರುವ ಆರೋಪಗಳ ಸರಣಿ ನೋಡಿದರೆ ಅವರಿಗೆ ಸದ್ಯಕ್ಕೆ ಜಾಮೀನು ಸಿಗುವುದು ಕಷ್ಟವೇ ಎನ್ನಬಹುದು.