ಅನೈತಿಕ ಸಂಬಂಧದ ಮಗು ಅಸಹಜ ಎಂದ ಪ್ರಲ್ಹಾದ್ ಜೋಶಿ

ಮಂಗಳವಾರ, 21 ಮೇ 2019 (10:59 IST)
ರಾಜ್ಯ ಮೈತ್ರಿ ಸರ್ಕಾರ ಅನೈತಿಕ ಸಂಬಂಧದಿಂದ ಹುಟ್ಟಿರುವ ಅಸಹಜ ಶಿಶು. ಶೀಘ್ರ ಸಾವನ್ನಪ್ಪುತ್ತದೆ ಎಂದು ಬಿಜೆಪಿ ಸಂಸದ ಹೇಳಿದ್ದಾರೆ.

ಚುನಾವಣೋತ್ತರ ಸಮೀಕ್ಷೆಗಳು ಎನ್‌ ಡಿ ಎ ಪರವಾಗಿ ಬಂದಿವೆ. ಹೀಗಾಗಿ ಬಿಜೆಪಿ ನೇತೃತ್ವದ ಎನ್‌ ಡಿ ಎ ಸರ್ಕಾರ ಮತ್ತೊಮ್ಮೆ ಆಡಳಿತಕ್ಕೆ ಬರುವುದು ಖಚಿತ ಎಂದು ಸಂಸದ ಪ್ರಲ್ಹಾದ್ ಜೋಶಿ ಹೇಳಿದ್ದಾರೆ. ಹುಬ್ಬಳ್ಳಿಯಲ್ಲಿ ಮಾತನಾಡಿದ ಅವರು, ನಮ್ಮ ಸಮೀಕ್ಷೆಗಳ ಪ್ರಕಾರವೂ ರಾಜ್ಯದಲ್ಲಿ 20 ಮತ್ತು ದೇಶದಲ್ಲಿ 280 ಕ್ಕೂ ಹೆಚ್ಚು ಸ್ಥಾನಗಳಲ್ಲಿ ಗೆಲ್ಲುತ್ತೇವೆ.

ಈ ಬಾರಿ ಆಡಳಿತದ ಪರವಾದ ಅಲೆ ಕೆಲಸ ಮಾಡಿದೆ. ಇನ್ನೂ ರಾಜ್ಯ ಮೈತ್ರಿ ಸರ್ಕಾರ ಅನೈತಿಕ ಸಂಬಂಧದಿಂದ ಹುಟ್ಟಿರುವ ಅಸಹಜ ಶಿಶು. ಆಂತರಿಕ ಕಚ್ಚಾಟದಿಂದ ರಾಜ್ಯ ಮೈತ್ರಿ ಸರ್ಕಾರ ಪತನವಾಗುತ್ತೆ ಎಂದರು.

ಸಂಖ್ಯಾಬಲ ಹೆಚ್ಚಿಸಿಕೊಂಡು ರಾಜ್ಯದಲ್ಲಿ ಬಿಜೆಪಿ ಸರ್ಕಾರ ಅಧಿಕಾರಕ್ಕೆ ಬರುತ್ತೆ ಎಂದಿದ್ದಾರೆ.ವೆಬ್ದುನಿಯಾವನ್ನು ಓದಿ

ಮುಂದಿನ ಸುದ್ದಿ ಮಾಜಿ ಶಾಸಕನ ಮನೆಯಲ್ಲಿ ಆಸ್ತಿಗಾಗಿ ಕಿತ್ತಾಟ; ಮಾರಣಾಂತಿಕ ಹಲ್ಲೆ