Publish Date: Mon, 20 May 2019 (13:21 IST)
Updated Date: Mon, 20 May 2019 (13:23 IST)
ಒಂದು ವರ್ಷದಲ್ಲಿ ನಾವು ಮಾಡಬೇಕಾದ ಕೆಲಸ ಮಾಡಿಲ್ಲ. ಹೀಗಂತ ಮಾಜಿ ಸಚಿವ ಹಾಗೂ ಕಾಂಗ್ರೆಸ್ ಶಾಸಕ ಹೇಳುವ ಮೂಲಕ ಮೈತ್ರಿ ಸರಕಾರಕ್ಕೆ ಶಾಕ್ ಕೊಟ್ಟಿದ್ದಾರೆ.
ಸಿಎಂ ಆಡಳಿತದ ಬಗ್ಗೆ ಪರೋಕ್ಷವಾಗಿ ಅಸಮಾಧಾನ ಹೊರಹಾಕಿದ್ದಾರೆ ಕಾಂಗ್ರೆಸ್ ಶಾಸಕ ತನ್ವೀರ್ ಸೇಠ್. ಒಂದು ವರ್ಷದಲ್ಲಿ ಹಲವು ಚುನಾವಣೆ ಬಂದವು. ಬಿಜೆಪಿ ಶಾಸಕರ ಖರೀದಿಗೆ ಮುಂದಾಗಿತ್ತು. ಲೋಕಸಭಾ ಚುನಾವಣೆಯೂ ಬಂದಿತ್ತು. ಈ ಎಲ್ಲ ಕಾರಣದಿಂದಾಗಿ ನಾವು ಒಂದು ವರ್ಷದಲ್ಲಿ ಮಾಡಬೇಕಾದ ಕೆಲಸ ಪರಿಪೂರ್ಣ ಆಗಿಲ್ಲ ಎಂದಿದ್ದಾರೆ.
ಆದ್ರೆ ಮುಂದಿನ ನಾಲ್ಕು ವರ್ಷ ನಾವು ಸಮರ್ಥವಾಗಿ ಆಡಳಿತ ಮಾಡುವ ವಿಶ್ವಾಸ ಇದೆ ಎಂದರು. ಬಸವರಾಜ ಹೊರಟ್ಟಿ ಹೇಳಿಕೆ ವೈಯುಕ್ತಿಕ ಹೇಳಿಕೆಯಾಗಿದೆ ಎಂದ ಅವರು, ಮುಂಬರುವ ಹೊಸ ಸರ್ಕಾರದ ಬಗ್ಗೆ ಮಾತನಾಡೋಣ.
ರಾಜ್ಯದಲ್ಲಿ ಇರುವ ಸಮ್ಮಿಶ್ರ ಸರ್ಕಾರದ ಬಗ್ಗೆ ಯಾಕೇ ಮಾತು ಅಂತ ಮೈಸೂರಿನಲ್ಲಿ ಕಾಂಗ್ರೆಸ್ ಶಾಸಕ ತನ್ವಿರ್ ಸೇಠ್ ಹೇಳಿಕೆ ನೀಡಿದ್ದಾರೆ.