Publish Date: Mon, 02 Feb 2026 (11:58 IST)
Updated Date: Mon, 02 Feb 2026 (11:59 IST)
ಬೆಂಗಳೂರು: ರಿಯಲ್ ಎಸ್ಟೇಟ್ ಉದ್ಯಮಿ, ಕಾನ್ಫಿಡೆಂಟ್ ಗ್ರೂಫ್‌ನ ಅಧ್ಯಕ್ಷ ಸಿಜೆ ರಾಯ್ ಸಾವು ಪ್ರಕರಣ ಸಂಬಂಧ ಕಾಂಗ್ರೆಸ್ ಶಾಸಕ ಪ್ರದೀಪ್ ಈಶ್ವರ್ ಇದೀಗ ಮತ್ತೇ ಹೊಸ ಬಾಂಬ್ ಸಿಡಿಸಿದ್ದಾರೆ.
ಇಂದು ಮಾಧ್ಯಮಕ್ಕೆ ಪ್ರತಿಕ್ರಿಯಿಸಿದ ಅವರು, ಸಿಜೆ ರಾಯ್ ಅವರನ್ನು ಎಲ್ಲರೂ ಹೇಳುತ್ತಾರೆ ಶೂಟ್ ಮಾಡಿಕೊಂಡು ಸತ್ತಿದ್ದಾರೆಂದು, ಆದರೆ ನಾವು ಯಾರಾದರೂ ಶೂಟೌಟ್ ಮಾಡಿಕೊಂಡಿದ್ದನ್ನು ನೋಡಿದ್ದೇವಾ ಎಂದು ಪ್ರಶ್ನೆ ಮಾಡಿದರು.
ಒಳಗೆಡೆ ಇದ್ದಿದ್ದು ಐಟಿ ಅಧಿಕಾರಿಗಳು, ಸತ್ತು ಹೋಗಿದ್ದು ಸಿಜೆ ರಾಯ್, ನಾವು ಯಾವಾ ಆಧಾರದಲ್ಲಿ ಅವರೇ ಶೂಟೌಟ್ ಮಾಡಿಕೊಂಡು ಸತ್ತರೆಂದು ಹೇಳುವುದಾ. ನನಗೆ ಈಗಾಲೂ ಅವರದ್ದು ಕೊಲೆ ಎಂಬ ಶಂಕೆಯಿದೆ ಎಂದು ಹೊಸ ಬಾಂಬ್ ಸಿಡಿಸಿದ್ದಾರೆ.
ಐಟಿ, ಇಡಿ ಅವರಿಗೇನು ಕೊಂಬಿಲ್ಲ, ನಮಗೂ ಅವರಿಗೂ ಒಂದೇ ಕಾನೂನು. ಯಾಕೆ ಅವರನ್ನೆಲ್ಲ ನೋಡಿದಾಗ ಭಯ ಬೀಳುತ್ತಾರೆ. ಸರಿಯಾಗಿ ತೆರಿಗೆ ಕಟ್ಟಿದರೆ ಭಯಬೀಳುವ ಅವಶ್ಯಕತೆಯಿಲ್ಲ ಎಂದರು.
ಸಿಜೆ ರಾಯ್ ಬುಲೆಟ್ ಹೊಡೆದುಕೊಂಡ್ರಾ, ಅಥವಾ ಯಾರಾದರು ಹೊಡೆದ್ರಾ ಎಂಬ ಅನುಮಾನವಿದೆ ಎಂದರು.