Select Your Language

Notifications

webdunia
webdunia
webdunia
webdunia

ಸಿಜೆ ರಾಯ್ ಆತ್ಮಹತ್ಯೆ ಪ್ರಕರಣ, ಹೊಸ ಬಾಂಬ್ ಸಿಡಿಸಿದ ಪ್ರದೀಪ್ ಈಶ್ವರ್‌

Confident Group CJ Roy

Sampriya

ಕನಕಪುರ , ಶನಿವಾರ, 31 ಜನವರಿ 2026 (16:07 IST)
Photo Credit X
ಕನಕಪುರ: ಕಾನ್ಫಿಡೆಂಟ್ ಗ್ರೂಪ್ ಅಧ್ಯಕ್ಷ ಸಿಜೆ ರಾಯ್ ಅವರು ಆತ್ಮಹತ್ಯೆ ಪ್ರಕರಣ ಸಂಬಂಧ ಕಾಂಗ್ರೆಸ್ ಶಾಸಕ ಪ್ರದೀಪ್ ಈಶ್ವರ್ ಅವರು ಹೊಸ ಬಾಂಬ್ ಸಿಡಿಸಿದ್ದು, ಇದು ಭಾರೀ ಚರ್ಚೆಯನ್ನು ಹುಟ್ಟುಹಾಕಿದೆ. 

ಬೆಂಗಳೂರು ದಕ್ಷಿಣ ಜಿಲ್ಲೆ ಕನಕಪುರದಲ್ಲಿ ಇಂದು ಮಾಧ್ಯಮಕ್ಕೆ ಪ್ರತಿಕ್ರಿಯಿಸಿದ ಅವರು, ಸಿಜೆ ರಾಯ್ ಅವರೇ ಶೂಟ್ ಮಾಡಿಕೊಂಡ್ರಾ ಅಥವಾ ಬೇರೆ ಯಾರಾದರೂ ಶೂಟ್ ಮಾಡಿಕೊಂಡರಾ ಎಂಬ ಅನುಮಾನವಿದೆ ಎಂಬ ಪ್ರದೀಪ್ ಈಶ್ವರ್ ಹೇಳಿಕೆ ಭಾರೀ ಕುತೂಹಲವನ್ನು ಮೂಡಿಸಿದೆ. 

ಶೂಟೌಟ್ ಸಂಬಂಧ ಐಟಿ ಅಧಿಕಾರಿಗಳ ಮೇಲೆ ಬೊಟ್ಟು ಮಾಡಿದರು. ಶೂಟೌಟ್ ಸಂದರ್ಭದಲ್ಲಿ ಆದಾಯ ತೆರಿಗೆ ಇಲಾಖೆ ಅಧಿಕಾರಿಗಳನ್ನು ಬಿಟ್ಟರೆ ಆ ಸ್ಥಳದಲ್ಲಿ ಬೇರೆ ಯಾರು ಇರಲಿಲ್ಲ. ಇನ್ನೂ ಸಿಸಿಟಿವಿ  ಕ್ಯಾಮರಾಗಳಲ್ಲೂ ಈ ದೃಶ್ಯ ಸೆರೆಯಾಗಿಲ್ಲ ಎಂದು ಹೇಳಿದರು.

ಕೇರಳ ಚುನಾವಣೆಗೆ ಬಿಜೆಪಿಯವರು ಸಿಜೆ ರಾಯ್ ಅವರಿಂದ ನೂರಾರು ಕೋಟಿ ಹಣವನ್ನು ಕೇಳಿದ್ರು, ಈ ವಿಚಾರದಲ್ಲೇ ಟಾರ್ಗೆಟ್ ಮಾಡಿ ಆದಾಯ ತೆರಿಗೆ ಇಲಾಖೆ ಅಧಿಕಾರಿಗಳ ತನಿಖೆಗೆ ಒಳಪಡಿಸಿದ್ದಾರೆ. ಈ ಪ್ರಕರಣವನ್ನು ಎಸ್ ಐಟಿ ತನಿಖೆಗೆ ಒಪ್ಪಿಸಬೇಕು ಎಂದು ಪ್ರದೀಪ್ ಈಶ್ವರ್ ಒತ್ತಾಯಿಸಿದರು.

ಸಿಬಿಐ ತನಿಖೆ ಮೇಲೆ ನಮಗೆ ನಂಬಿಕೆ ಇಲ್ಲ. ಅದು ಬಿಜೆಪಿ ಕೈಯಲಿದೆ ಎಂದು ಪ್ರದೀಪ್ ಈಶ್ವರ್ ಆರೋಪಿಸಿದರು.

Share this Story:

Follow Webdunia kannada

ಮುಂದಿನ ಸುದ್ದಿ

ಮಹಾರಾಷ್ಟ್ರ ರಾಜಕೀಯದಲ್ಲಿ ಬಹತ್ವದ ನಿರ್ಧಾರ, ಸುನೇತ್ರಾ ಪವಾರ್‌ಗೆ ಅತ್ಯುನ್ನತ ಹುದ್ದೆ