Select Your Language

Notifications

webdunia
webdunia
webdunia
webdunia

ಮೋಹನ್ ಭಾಗವತ್ ಅಂದರೆ ಪೂಜ್ಯನಿಯ ಭಾವನೆಯಿತ್ತು: ಪ್ರದೀಪ್ ಈಶ್ವರ್‌

Mohan Bhagwat

Sampriya

ಬೆಂಗಳೂರು , ಸೋಮವಾರ, 10 ನವೆಂಬರ್ 2025 (15:26 IST)
Photo Credit X
ಬೆಂಗಳೂರು: ಬಡತನ, ನಿರುದ್ಯೋಗ ಬಗ್ಗೆ ಮಾತನಾಡುತ್ತೀರಿ ಎಂದು ಅಂದುಕೊಂಡಿದ್ದರೆ ನೀವು ಕೂಡಾ ಯತ್ನಾಳ್, ಸಿಟಿ ರವಿ ಅವರ ಗುಂಪಿಗೆ ಸೇರಿಕೊಂಡಿದ್ದೀರಿ ಎಂದು ಆರ್‌ಎಸ್‌ಎಸ್‌ ಮುಖಂಡ ಮೋಹನ್ ಭಾಗವತ್ ಮಾತಿಗೆ ಕಾಂಗ್ರೆಸ್ ಶಾಸಕ ಪ್ರದೀಪ್ ಈಶ್ವರ್ ಪ್ರತಿಕ್ರಿಯಿಸಿದ್ದಾರೆ.

ಹಿಂದೂ ರಾಷ್ಟ್ರದ ಬಗ್ಗೆ ಮೋಹನ್‌ ಭಾಗವತ್ ಹೇಳಿಕೆ ವಿಚಾರವಾಗಿ ವಿಧಾನಸೌಧದಲ್ಲಿ ಪ್ರತಿಕ್ರಿಯಿಸಿದ ಅವರಿ,  ಯತ್ನಾಳ್,‌ ಆರ್.ಅಶೋಕ್, ಸಿ.ಟಿ ರವಿ ಇವರಿಗಂತೂ ಬುದ್ದಿ ಇಲ್ಲ. ನಮ್ಮ ದೇಶ ಹಸಿವಿನ ಗ್ರಾಫ್‌ನಲ್ಲಿ ಎಷ್ಟನೇ ಸ್ಥಾನದಲ್ಲಿದೆ ಎಂದು ಮೊದಲು ನೋಡಿ. 

ದೇಶ ಹಸಿವಿನಿಂದ ನರಳುತ್ತಿದೆ ಇದರ ಬಗ್ಗೆ ಮಾತನಾಡಿ. ನಿರುದ್ಯೋಗ ಜಾಸ್ತಿ ಆಗುತ್ತಿದೆ, ಆಂತರಿಕ ಭದ್ರತೆ, ನಾವು ಪಾಕಿಸ್ತಾನವನ್ನು ಹೇಗೆ ಸದೆಬಡಿಬೇಕು ಎನ್ನುವುದರ ಬಗ್ಗೆ ನೀವು ಮಾತನಾಡಿ. ಆದರೆ ನೀವು ಯತ್ನಾಳ್‌, ಸಿಟಿ ರವಿ ಗುಂಪಿಗೆ ಸೇರಿಕೊಂಡಿದ್ದೀರಿ ಎಂದು ಆಕ್ರೋಶ ಹೊರಹಾಕಿದರು. 

ಮೋಹನ್ ಭಾಗವತ್ ಅಂದರೆ ಪೂಜ್ಯನಿಯ ಭಾವನೆ ಇತ್ತು. ಬೆಂಗಳೂರಿಗೆ ಬಂದು ಹಿಂದೂರಾಷ್ಟ್ರ ಬಗ್ಗೆ ಮಾತಾಡ್ತೀರಾ. ನೀವು ಅಬ್ದುಲ್‌ ಕಲಾಂ ಟ್ರೂ ನ್ಯಾಷನಲ್ ಲೀಡರ್ ಅಂತ ಕರೆದಿದ್ದೀರಿ. ಆದರೆ ಅವರು ಮುಸ್ಲಿಂ ಧರ್ಮದಲ್ಲಿ ಹುಟ್ಟಿದ್ದು. ದೇಶ ಭಕ್ತರು ಹಿಂದೂ, ಮುಸ್ಲಿಂ, ಕ್ರೈಸ್ತ, ಪಾರ್ಸಿ ಧರ್ಮದಲ್ಲೂ ಇದ್ದಾರೆ.

Share this Story:

Follow Webdunia kannada

ಮುಂದಿನ ಸುದ್ದಿ

ಸಿಎಂ, ಗೃಹ ಸಚಿವರ ರಾಜೀನಾಮೆಗೆ ವಿಜಯೇಂದ್ರ ಆಗ್ರಹ