Select Your Language

Notifications

webdunia
webdunia
webdunia
webdunia

ವಿದ್ಯುತ್ ಅವಘಡ: ಲಕ್ಷಾಂತರ ಮೌಲ್ಯದ ಸ್ವತ್ತು ನಾಶ

ವಿದ್ಯುತ್ ಅವಘಡ: ಲಕ್ಷಾಂತರ ಮೌಲ್ಯದ ಸ್ವತ್ತು ನಾಶ
ಕಲಬುರಗಿ , ಶುಕ್ರವಾರ, 26 ಅಕ್ಟೋಬರ್ 2018 (18:24 IST)
ವಿದ್ಯುತ್ ಶಾರ್ಟ್ ಸರ್ಕ್ಯೂಟ್ ನಿಂದ ಎಲೆಕ್ಟ್ರಿಕಲ್ ಶಾಪ್ ನಲ್ಲಿ ಬೆಂಕಿ ಹತ್ತಿಕೊಂಡು ಲಕ್ಷಾಂತರ ರೂಪಾಯಿ ಮೌಲ್ಯದ ವಸ್ತುಗಳು ಸುಟ್ಟು ಕರಕಲಾದ ಘಟನೆ ನಡೆದಿದೆ.

ಕಲಬುರ್ಗಿಯ ಮುಖ್ಯ ರಸ್ತೆಯಲ್ಲಿ ಈ ಘಟನೆ ನಡೆದಿದೆ. ಜೆಸ್ಕಾಂ ಕಛೇರಿಯ ಮುಂಭಾಗದಲ್ಲಿರುವ ಯತಿನ್ ಕಾಂಪ್ಲೆಕ್ಸ್ ನಲ್ಲಿ ದುರ್ಘಟನೆ ಸಂಭವಿಸಿದೆ. ಬೆಳಿಗ್ಗೆ ಅಂಗಡಿ ಶೆಟರ್ ತೆಗೆದ ನಂತರ ಇದ್ದಕ್ಕಿದ್ದಂತೆ ಬೆಂಕಿ ಹತ್ತಿಕೊಂಡಿದೆ.

ಮೊದಲು ನಾಮ ಫಲಕಕ್ಕೆ ಹತ್ತಿಕೊಂಡ ಬೆಂಕಿ, ನಂತರ ಶಾಪ್ ಒಳಗಡೆ ವ್ಯಾಪಿಸಿದೆ. ಸ್ಥಳಕ್ಕೆ ಅಗ್ನಿ ಶಾಮಕ ಸಿಬ್ಬಂದಿ ದೌಡಾಯಿಸಿದ್ದು, ಬೆಂಕಿ ನಂದಿಸಲು ಹರಸಾಹಸಪಟ್ಟರು. ಘಟನೆಯಲ್ಲಿ ಲಕ್ಷಾಂತರ ರೂಪಾಯಿ ಮೌಲ್ಯದ ಎಲೆಕ್ಟ್ರಿಕಲ್ ಸಾಮಾಗ್ರಿಗಳು ಹಾನಿಗೀಡಾಗಿವೆ.

ಸ್ಟೇಷನ್ ಬಜಾರ್ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.



Share this Story:

Follow Webdunia kannada

ಮುಂದಿನ ಸುದ್ದಿ

ಜೆ.ಶಾಂತ ಪರ ವಿ.ಸೋಮಣ್ಣ ಪ್ರಚಾರ