Publish Date: Wed, 24 Oct 2018 (09:14 IST)
Updated Date: Wed, 24 Oct 2018 (09:15 IST)
ಬೆಂಗಳೂರು: ಬೆಳಕಿನ ಹಬ್ಬ ದೀಪಾವಳಿಗೆ ವಾರಗಳು ಬಾಕಿ ಇರುವಾಗಲೇ ರಾಜ್ಯ ವಿದ್ಯುತ್ ನಿಗಮ ಜನತೆಗೆ ವಿದ್ಯುತ್ ಶಾಕ್ ನೀಡಲು ಮುಂದಾಗಿದೆ.
ಇಂದಿನಿಂದಲೇ ರಾಜ್ಯದಾದ್ಯಂತ ಲೋಡ್ ಶೆಡ್ಡಿಂಗ್ ಜಾರಿ ಮಾಡಲು ಆದೇಶ ನೀಡಿದೆ. ಇದರಂತೆ ನಗರಗಳಲ್ಲಿ ಪ್ರತಿನಿತ್ಯ ಬೆಳಿಗ್ಗೆ 8 ಗಂಟೆಯಿಂದ ಮಧ್ಯಾಹ್ನ 12 ಗಂಟೆಯವರೆಗೆ ಮಾತ್ರ ಥ್ರೀ ಫೇಸ್ ವಿದ್ಯುತ್ ಇರಲಿದೆ. ಗ್ರಾಮೀಣ ಭಾಗಗಳಲ್ಲಿ 8 ಗಂಟೆ ಮಾತ್ರ ಟೂ ಫೇಸ್ ವಿದ್ಯುತ್ ಒದಗಿಸಲಾಗುತ್ತದೆ.
ಈಗಾಗಲೇ ಬೆಸ್ಕಾಂ, ಮೆಸ್ಕಾಂ, ಹೆಸ್ಕಾಂ ಸೇರಿದಂತೆ ರಾಜ್ಯದ ಎಲ್ಲಾ ವಿದ್ಯುತ್ ನಿಗಮ ಮಂಡಳಿಗಳಿಗೆ ಆದೇಶ ಜಾರಿಗೊಳಿಸಲು ಸೂಚಿಸಲಾಗಿದೆ. ಕೆಲವೆಡೆ ನಿನ್ನೆಯಿಂದಲೇ ಆದೇಶ ಪಾಲನೆ ಮಾಡಲಾಗುತ್ತಿದೆ.
ತಾಜಾ ಸುದ್ದಿಗಳನ್ನು ಓದಲು ವೆಬ್ ದುನಿಯಾ ಮೊಬೈಲ್ ಆಪ್ ಡೌನ್ ಲೋಡ್ ಮಾಡಿಕೊಳ್ಳಿ.