Select Your Language

Notifications

webdunia
webdunia
webdunia
webdunia

ಮೈಸೂರು ಬಲೂನ್ ಮಾರುತ್ತಿದ್ದ ಬಾಲಕಿಗೆ ಪಾಪಿ ಹೇಗೆಲ್ಲಾ ಹಿಂಸೆ ಮಾಡಿದ್ದ: ಮರಣೋತ್ತರ ಪರೀಕ್ಷೆಯಲ್ಲಿ ಬಯಲು

Mysore rape and murder case

Krishnaveni K

ಮೈಸೂರು , ಶನಿವಾರ, 11 ಅಕ್ಟೋಬರ್ 2025 (14:11 IST)
ಮೈಸೂರು: ಇಲ್ಲಿ ಬಲೂನ್ ಮಾರುತ್ತಿದ್ದ ಹಕ್ಕಿ ಪಿಕ್ಕಿ ಜನಾಂಗದ 10 ವರ್ಷದ ಪುಟ್ಟ ಬಾಲಕಿಯನ್ನು ಅಪಹರಿಸಿ ರೇಪ್ ಮಾಡಿ ಕೊನೆಗೆ ಕೊಲೆ ಮಾಡಿದ್ದ ಆರೋಪಿ ಕಾರ್ತಿಕ್ ಹೇಗೆಲ್ಲಾ ಹಿಂಸೆ ನೀಡಿದ್ದ ಎನ್ನುವುದು ಮರಣೋತ್ತರ ಪರೀಕ್ಷೆಯಲ್ಲಿ ವರದಿಯಾಗಿದೆ.

ದಸರಾ ಸಂದರ್ಭದಲ್ಲಿ ಬಲೂನ್ ಮಾರಿ ಜೀವನ ನಿರ್ವಹಣೆಗೆಂದು ಕುಟುಂಬದ ಜೊತೆ ಬಂದಿದ್ದ ಬಾಲಕಿಯನ್ನು ರಾತ್ರಿ ಮಲಗಿದ್ದಾಗ ಅಪಹರಿಸಿದ್ದ ಆರೋಪಿ ಕಾರ್ತಿಕ್ ಕುಡಿದ ಮತ್ತಿನಲ್ಲಿ ಆಕೆಯ ಮೇಲೆ ಅತ್ಯಾಚಾರವೆಸಗಿದ್ದ.

ಕೃತ್ಯದ ಬಳಿಕ ಬಾಲಕಿ ಮೇಲೆ ಸುಮಾರು 18-19 ಬಾರಿ ಚಾಕುವಿನಿಂದ ಇರಿದಿದ್ದಾನೆ ಎನ್ನಲಾಗಿದೆ. ಮರಣೋತ್ತರ ಪರೀಕ್ಷೆ ವೇಳೆ ಬಾಲಕಿ ಮೃತದೇಹದಲ್ಲಿ ಹಲವು ಕಡೆ ಚಾಕುವಿನಿಂದ ಇರಿದ ಗಾಯಗಳು ಕಂಡುಬಂದಿವೆ. ಕೊನೆಯ ಕ್ಷಣದಲ್ಲಿ ಬಾಲಕಿ ಎಷ್ಟು ನೋವು ಅನುಭವಿಸಿರಬಹುದು ಎಂಬುದಕ್ಕೆ ಇದುವೇ ಸಾಕ್ಷಿಯಾಗಿದೆ. ಕೊಲೆ ಮಾಡಿದ ಬಳಿಕ ಬಾಲಕಿಯ ಟೆಂಟ್ ಬಳಿಯೇ ಮೃತದೇಹ ಬಿಸಾಕಿ ಆರೋಪಿ ಪರಾರಿಯಾಗಿದ್ದ. ಇದೀಗ ಪೊಲೀಸರು ಆತನನ್ನು ಸೆರೆಹಿಡಿದಿದ್ದಾರೆ.

Share this Story:

Follow Webdunia kannada

ಮುಂದಿನ ಸುದ್ದಿ

ರಾಹುಲ್ ಗಾಂಧಿ ಜೊತೆಗೆ ಸಿದ್ದರಾಮಯ್ಯ ಮೊಮ್ಮಗ ಪೋಸ್: ಕನ್ನಡ ಬರೆದುಕೊಟ್ಟಿದ್ದು ಯಾರು ಎಂದ ನೆಟ್ಟಿಗರು