Publish Date: Sat, 29 Sep 2018 (19:19 IST)
Updated Date: Sat, 29 Sep 2018 (19:25 IST)
ಸರಿಪಡಿಸಲಾರದಂತಹ ಸ್ಥಿತಿಗೆ ರಾಜಕೀಯ ತಲುಪುತ್ತಿದೆ ಎಂದು ಜೆಡಿಎಸ್ ವರಿಷ್ಠ ಹಾಗೂ ಮಾಜಿ ಪ್ರಧಾನಿ ಹೆಚ್.ಡಿ. ದೇವೇಗೌಡರು ಕಳವಳ ವ್ಯಕ್ತಪಡಿಸಿದ್ದಾರೆ.
ಬೆಂಗಳೂರಿನಲ್ಲಿ ಜೆಡಿಎಸ್ ಪಕ್ಷದ ರಾಜ್ಯಾಧ್ಯಕ್ಷ ಹೆಚ್.ವಿಶ್ವನಾಥ್ ಅವರ ಅಥೆನ್ಸ್ ರಾಜ್ಯಾಡಳಿತ ಕೃತಿ ಬಿಡುಗಡೆ ಸಮಾರಂಭದಲ್ಲಿ ಮಾನತಾಡಿದ ಹೆಚ್.ಡಿ.ದೇವೇಗೌಡರು, ರಾಜಕೀಯ ವ್ಯವಸ್ಥೆ ಸಂಪೂರ್ಣವಾಗಿ ಕೆಟ್ಟು ಹೋಗಿದೆ. ಈ ವ್ಯವಸ್ಥೆ ಸರಿಪಡಿಸುವುದು ಕಷ್ಟ ಎಂಬ ಸ್ಥಿತಿಗೆ ಬಂದು ನಿಂತಿದ್ದೇವೆ ಎಂದರು.
ಐದಾರು ದಶಕಗಳ ಹಿಂದೆ ಮತದಾನ ಪವಿತ್ರ ಕಾರ್ಯ ಎಂಬ ಭಾವನೆ ಇತ್ತು. ಪೂಜೆ ಮಾಡಿ ಮತದಾನ ಮಾಡುತ್ತಿದ್ದರು. ಈಗ ಪರಿಸ್ಥಿತಿ ಭಿನ್ನವಾಗಿದೆ ಎಂದು ಮಾರ್ಮಿಕವಾಗಿ ಹೇಳಿದರು.