Select Your Language

Notifications

webdunia
webdunia
webdunia
webdunia

ಕಬ್ಬು ಬಾಕಿ ಪಾವತಿ ಮಾಡಿ ಎಂದ ಡಿಸಿ

ಕಬ್ಬು ಬಾಕಿ ಪಾವತಿ ಮಾಡಿ ಎಂದ ಡಿಸಿ
ಮಂಡ್ಯ , ಶನಿವಾರ, 29 ಸೆಪ್ಟಂಬರ್ 2018 (16:44 IST)
14 ದಿನಗಳಲ್ಲಿ ಕಬ್ಬು ಬೆಳೆಗಾರರ ಬಾಕಿ ಪಾವತಿ ಮಾಡಬೇಕು. ವಿಳಂಬವಾದರೆ ಬಡ್ಡಿ ಸಮೇತ ರೈತರಿಗೆ ಹಣ ಪಾವತಿ ಮಾಡುವಂತೆ ಸೂಚಿಸಿದ್ದು, ತಪ್ಪಿದ್ದಲ್ಲಿ ದಾಸ್ತಾನನ್ನು ವಶಕ್ಕೆ ಪಡೆಯುವ ಎಚ್ಚರಿಕೆಯನ್ನು ಜಿಲ್ಲಾಧಿಕಾರಿ ನೀಡಿದ್ದಾರೆ. 

ಸಕ್ಕರೆ ನಾಡು ಮಂಡ್ಯ ಜಿಲ್ಲೆಯ ರೈತರು ಒಂದೆಡೆ ಸಂಕಷ್ಟಕ್ಕೆ ಸಿಲುಕಿ ಆತ್ಮಹತ್ಯೆ ದಾರಿ ಹಿಡಿಡಿದ್ದು, ಮತ್ತೊಂದೆಡೆ  ಸಕ್ಕರೆ ಕಾರ್ಖಾನೆಗಳು  ಕಬ್ಬಿನ ಹಣ ಪಾವತಿಸದೇ ಇರೋದು ರೈತರನ್ನ ಮತ್ತಷ್ಟು ಸಂಕಷ್ಟಕ್ಕೆ ತಳ್ಳಿದೆ.

ಮಂಡ್ಯ ಜಿಲ್ಲೆಯಲ್ಲಿ 5 ಕಾರ್ಖಾನೆಗಳಿದ್ದು, ಇದರಲ್ಲಿ ಒಂದು ಕಾರ್ಖಾನೆ ಮುಚ್ಚಿದೆ. ಇನ್ನು 4 ಕಾರ್ಖಾನೆಗಳು ರೈತರಿಗೆ 2018-19ನೇ ಅವಧಿಯಲ್ಲಿ 96.83 ಕೋಟಿ ರೂಪಾಯಿಗಳ ಬಾಕಿಯನ್ನು ಪಾವತಿಸಬೇಕಾಗಿದೆ. ಮದ್ದೂರು ತಾಲೂಕಿನ ಕೊಪ್ಪದ ಎನ್‌ಎಸ್‌ಎಲ್ ಕಾರ್ಖಾನೆ 37.80 ಕೋಟಿ, ಕೆ.ಎಂ.ದೊಡ್ಡಿಯ ಚಾಮುಂಡೇಶ್ವರಿ ಕಾರ್ಖಾನೆ 25.80 ಕೋಟಿ, ಕೆ.ಆರ್.ಪೇಟೆ ತಾಲೂಕಿನ ಐಸಿಎಲ್ 28.69 ಕೋಟಿ ಹಾಗೂ ಸರ್ಕಾರಿ ಸ್ವಾಮ್ಯದ ಮೈಶುಗರ್ 4.84 ಕೋಟಿ ರೂಪಾಯಿಗಳ ಮೊತ್ತವನ್ನು ಪಾವತಿ ಮಾಡಬೇಕಾಗಿದೆ ಎಂದು ತಿಳಿದುಬಂದಿದೆ.

ರೈತರ ಸರಣಿ ಆತ್ಮಹತ್ಯೆ ಹಿನ್ನಲೆಯಲ್ಲಿ ಇಷ್ಟೊಂದು ದೊಡ್ಡ ಮೊತ್ತದ ಹಣ ಪಾವತಿ ಮಾಡುವಂತೆ ಜಿಲ್ಲಾಧಿಕಾರಿ ಮಂಜುಶ್ರೀ ನೋಟಿಸ್ ನೀಡಿದ್ದಾರೆ. 14 ದಿನಗಳ ಗಡುವು ನೀಡಿದ್ದಾರೆ. ಒಂದು ವೇಳೆ ಪಾವತಿ ಮಾಡುವುದು ವಿಳಂಬವಾದರೆ ಬಡ್ಡಿ ಸಮೇತ ರೈತರಿಗೆ ಹಣ ಪಾವತಿ ಮಾಡುವಂತೆ ಸೂಚಿಸಿದ್ದು, ತಪ್ಪಿದ್ದಲ್ಲಿ ದಾಸ್ತಾನನ್ನು ವಶಕ್ಕೆ ಪಡೆಯುವ ಎಚ್ಚರಿಕೆ ನೀಡಿದ್ದಾರೆ. 




Share this Story:

Follow Webdunia kannada

ಮುಂದಿನ ಸುದ್ದಿ

ಮಾಧ್ಯಮಗಳ‌‌ ಬಗ್ಗೆ ಅವಹೇಳನಕಾರಿ ಮಾತು: ಶಾಸಕ ಬಿ.ನಾರಾಯಣರಾವ್ ವಿರುದ್ಧ ಆಕ್ರೋಶ