Select Your Language

Notifications

webdunia
webdunia
webdunia
webdunia

ನರೇಗ ಕೂಲಿ ಕೆಲಸಕ್ಕೆ ಹೋಗಿದ್ದ ಕಾರ್ಮಿಕ ಸಾವು

Political raid: dk suresh
maski , ಗುರುವಾರ, 5 ಆಗಸ್ಟ್ 2021 (20:02 IST)
ನರೇಗಾ ಕೂಲಿ ಕೆಲಸಕ್ಕೆ ಹೋಗಿದ್ದ ಕಾರ್ಮಿಕ ಕರೆಯಲ್ಲಿ ಬಿದ್ದು ಸ್ವಾನ್ನಪ್ಪಿರುವ ಘಟನೆ ರಾಯಚೂರು ಜಿಲ್ಲೆಯಲ್ಲಿ ನಡೆದಿದೆ. ಜಿಲ್ಲೆಯ ಮಸ್ಕಿ ತಾಲೂಕಿನ ಸಾನಬಾಳ್ ಗ್ರಾಮದಲ್ಲಿ ಹೊರವಲಯದಲ್ಲಿನ ಕರೆಯಲ್ಲಿ ಘಟನೆ ಜರುಗಿದೆ. ನಾಗೇಶ್(50) ಮೃತ ಕೂಲಿ ಕಾರ್ಮಿಕನೆಂದು ಗುರುತಿಸಲಾಗಿದೆ. ಇಂದು ಅಂಕುಶದೊಡ್ಡಿ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಬರುವ ಸಾನಬಾಳ ಗ್ರಾಮದ ಕೆರೆಯ ಕೆಲಸಕ್ಕೆ ತೆರಳಿದ್ದರು. ಎಲ್ಲಾ ಕಾರ್ಮಿಕರು ಕೆಲಸ ಮುಗಿಸಿಕೊಂಡು ಮನೆಗೆ ವಾಪಾಸ್ ಆಗಿದ್ರು. ಆದ್ರೆ ನಾಗೇಶ್ ಮಾತ್ರ ಮನೆಗೆ ಮರಳಿರಲಿಲ್ಲ. ಇದರಿಂದ ಗಾಬರಿಗೊಂಡು ಎಲ್ಲಾ ಕಡೆ ಹುಡಕಿ ಬಳಿಕ ಕೆರೆಯ ಕಡೆ ಸಹ ಶೋಧ ಮಾಡಿದ್ದಾರೆ. ಆಗ ಕೆರೆಯಲ್ಲಿ ಮೃತ ದೇಹ ಪತ್ತೆಯಾಗಿದೆ. ಕಾಲು ಜಾರಿ ಕೆರೆಯಲ್ಲಿ ಎಂದು ಶಂಕೆ ವ್ಯಕ್ತಪಡಿಸಿ ಸಾವಿನ ಬಗ್ಗೆ ಅನುಮಾನಗಳು ಹುಟ್ಟಿಕೊಂಡಿವೆ. ಮೃತ ದೇಹವನ್ನ ಹೊರಗಡೆ ತೆಗೆಯಲಾಗಿದ್ದು, ಮರಣೋತ್ತರ ಪರೀಕ್ಷೆಗಾಗಿ ಆಸ್ಪತ್ರೆಗ ರವಾನಿಸಲಾಗಿದೆ. ಮಸ್ಕಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ನಾಗೇಶ್ ಕಳೆದುಕೊಂಡು ಕುಟುಂಬಸ್ಥರು ಆಕ್ರಂದನ ಮುಗಿಲು ಮುಟ್ಟಿದೆ.
maski

Share this Story:

Follow Webdunia kannada

ಮುಂದಿನ ಸುದ್ದಿ

ಅಣ್ಣಾಮಲೈ ಪ್ರತಿಭಟನೆಗೆ ಐ ಡೋಂಟ್ ಕೇರ್ ಎಂದ ಸಿಎಂ ಬೊಮ್ಮಾಯಿ