ಮೇಕೆದಾಟು ಯೋಜನೆ ಮಾಡಿಯೇ ಸಿದ್ಧ. ಅಣ್ಣಾಮಲೈ ಪ್ರತಿಭಟನೆಗೆ ಡೋಂಟ್ ಕೇರ್ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಖಡಕ್ ಆಗಿ ಉತ್ತರಿಸಿದ್ದಾರೆ.
ಬೆಂಗಳೂರಿನಲ್ಲಿ ಗುರುವಾರ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು, ಅವನನ್ನ ದೊಡ್ಡ ಮನುಷ್ಯನನ್ನಾಗಿ ಮಾಡಬೇಡಿ. ಎರಡು ರಾಜ್ಯಗಳ ಸಂಬಂಧದ ವಿ
ಚಾರವಿದು. ಹೆಚ್ಚುವರಿ ನೀರು ತಡೆದು, ನೀರು ಕೊಡುವ ಯೋಜನೆ ಇದಾಗಿದೆ. ಅದಕ್ಕೇ ನಾವು ಈ ಯೋಜನೆ ತರ್ತಿದ್ದೇವೆ ಎಂದರು.
ಮೇಕೆದಾಟು ಯೋಜನೆ ವಿರುದ್ಧ ಯಾವ ಪ್ರತಿಭಟನೆಗೂ ಐ ಡೋಂಟ್ ಕೇರ್. ಯೋಜನೆ ಮಾಡಿಯೇ ಮಾಡುತ್ತೇವೆ. ಸುಪ್ರೀಂ ಕೋರ್ಟ್ ಕೂಡ ಇದನ್ನೇ ಹೇಳಿದೆ. ಅದಕ್ಕೆ ಈ ಯೋಜನೆ ತರುವುದು ಪ್ರತಿಭಟನೆ ಮಾಡ್ತಾರೆ ಅಂದರೆ ಅದು ರಾಜಕೀಯ ಪ್ರೇರಿತ ಅಷ್ಟೇ ಎಂದು ಬೊಮ್ಮಾಯಿ ಸ್ಪಷ್ಟಪಡಿಸಿದರು.
ಸೂಕ್ತ ಸಂಗಾತಿ ಬೇಕಾ? ಕನ್ನಡ ಮ್ಯಾಟ್ರಿಮೊನಿಯಲ್ಲಿ - ನೋಂದಣಿ ಉಚಿತ!