Select Your Language

Notifications

webdunia
webdunia
webdunia
webdunia

ಮೇಕೆದಾಟು ಯೋಜನೆ ವಿರೋಧಿಸಿದ ಅಣ್ಣಾಮಲೈ ವಿರುದ್ಧ ರೈತರ ಆಕ್ರೋಶ

annamali
geethanjali , ಶನಿವಾರ, 31 ಜುಲೈ 2021 (17:56 IST)
ಮೇಕೆದಾಟು ಅಣೆಕಟ್ಟು ನಿರ್ಮಾಣ ಕೈಗೊಂಡರೆ ಉಪವಾಸ ಸತ್ಯಾಗ್ರಹ ಎಂದಿರುವ ಅಣ್ಣಾಮಲೈ ಹೇಳಿಕೆಯನ್ನು ಖಂಡಿಸಿ ರೈತ ಮುಖಂಡರು ಆಕ್ರೋಶವ್ಯಕ್ತಪಡಿಸಿದ್ದು, ಅಣ್ಣಾಮಲೈ ಕರ್ನಾಟಕದಲ್ಲಿ ಐಪಿಎಸ್ ಆಗಿದ್ದವರು ಎಂಬುದನ್ನು ಮರೆಯಬಾರದು ಎಂದು ಹೇಳಿದ್ದಾರೆ.
ಮೇಕೆದಾಟು ಯೋಜನೆ ವಿರೋಧಿಸಿ ಕರ್ನಾಟಕದ ವಿರುದ್ಧ ಉಪವಾಸ ಸತ್ಯಾಗ್ರಹ ಮಾಡ್ತೀನಿ ಎಂದಿದ್ದಾರೆ.  ಅಣ್ಣಾಮಲೈ ಅವರ ಈ ನಿರ್ಧಾರ ಸರಿಯಲ್ಲ, ಅವರು ಸಮಾಜಕ್ಕೆ ಉತ್ತಮ ಸಂದೇಶ ನೀಡಲಿ. ಮೇಕೆದಾಟು ಅಣೆಕಟ್ಟಿನಿಂದ ಎರಡೂ ರಾಜ್ಯಕ್ಕೆ ಉಪಯೋಗ ಇದೆ. ಅಣ್ಣಾಮಲೈ ಅವರ ಹೇಳಿಕೆಯನ್ನ ಹಿಂಪಡೆಯಲಿ ಎಂದು ರೈತ ಮುಖಂಡ ಮರಳಾಪುರ ಮಂಜೇಗೌಡ ಆಗ್ರಹಿಸಿದರು.
ಆಗಸ್ಟ್ 3 ರಂದು ಮೇಕೆದಾಟುವಿನಿಂದ ವಿಧಾನ ಸೌಧದ ವರೆಗೆ ರೈತ ಸಂಘದ ಪದಾಧಿಕಾರಿಗಳು ಪಾದಯಾತ್ರೆಯನ್ನ ಹಮ್ಮಿಕೊಂಡಿದ್ದರು. ಆದರೆ ರಾಜ್ಯ ರಾಜಕೀಯದಲ್ಲಿ ಬದಲಾದ ಪರಿಸ್ಥಿತಿ ಯಲ್ಲಿ ರೈತ ಸಂಘದ ಮುಖಂಡರು ಪಾದಯಾತ್ರೆಯನ್ನ ಮುಂದೂಡಿದ್ದಾರೆ.

Share this Story:

Follow Webdunia kannada

ಮುಂದಿನ ಸುದ್ದಿ

ಕೊರೋನಾ ಹೋರಾಟಕ್ಕೆ ರಾಜ್ಯಗಳಿಗೆ 1800 ಕೋಟಿ ಕಳಿಸಿದ ಕೇಂದ್ರ