Publish Date: Fri, 28 May 2021 (12:53 IST)
Updated Date: Fri, 28 May 2021 (12:55 IST)
ತಮಿಳುನಾಡು : ಹಾವು ಕೊವಿಡ್ ಗೆ ಉತ್ತಮ ಔಷಧಿ ಎಂದು ಹೇಳಿ ವ್ಯಕ್ತಿಯೊಬ್ಬ ಹಾವನ್ನು ಬಾಯಿಗೆ ಹಾಕಿಕೊಂಡು ಅಗೆದ ಘಟನೆ ತಮಿಳುನಾಡಿನಲ್ಲಿ ನಡೆದಿದೆ.
50 ವರ್ಷದ ಕೃಷಿ ಕಾರ್ಮಿಕ ಇಂತಹ ಕೆಲಸ ಮಾಡಿದ್ದು, ಇದಕ್ಕೆ ಸಂಬಂಧಪಟ್ಟ ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ. ಆತ ಹಾವುಗಳು ಕೊವಿಡ್ ವೈರಸ್ ನಿಂದ ರಕ್ಷಿಸಿಕೊಳ್ಳಲು ಉತ್ತಮವಾಗಿದೆ ಎಂದು ಹೇಳುತ್ತಿದ್ದಾನೆ.
ಈ ವಿಡಿಯೋ ವೀಕ್ಷಿಸಿದ ಜಿಲ್ಲಾ ಅರಣ್ಯಾಧಿಕಾರಿ ವ್ಯಕ್ತಿಯನ್ನು ಬಂಧಿಸುವಂತೆ ಸೂಚಿಸಿದ್ದ ಹಿನ್ನಲೆಯಲ್ಲಿ ಆತನನ್ನು ಬಂಧಿಸಿ 7000ರೂ.ಗಳ ದಂಡ ವಿಧಿಸಿದೆ ಎನ್ನಲಾಗಿದೆ.