Select Your Language

Notifications

webdunia
webdunia
webdunia
webdunia

ಖತರ್ನಾಕ್ ಕಳ್ಳರನ್ನು ಬಂಧಿಸಿದ ಬೆಳಗಾವಿ ಪೊಲೀಸರು!

ಖತರ್ನಾಕ್ ಕಳ್ಳರನ್ನು ಬಂಧಿಸಿದ ಬೆಳಗಾವಿ ಪೊಲೀಸರು!
ಬೆಳಗಾವಿ , ಶನಿವಾರ, 22 ಅಕ್ಟೋಬರ್ 2016 (09:23 IST)
ಬೆಳಗಾವಿ: ನಗರದ ವಿವಿಧ ಪೋಲೀಸ್ ಠಾಣೆಗಳ ವ್ಯಾಪ್ತಿಯಲ್ಲಿ ನಡೆದ ಹದಿನೈದು ಕಳ್ಳತನದ ಪ್ರಕರಣಗಳನ್ನು ಪೊಲೀಸರು ಭೇದಿಸುವಲ್ಲಿ ಯಶಸ್ವಿಯಾಗಿದ್ದು, ಬಂಧಿತ ಇಬ್ಬರು ಆರೋಪಿಗಳಿಂದ ರಿವಾಲ್ವರ್, ಚಿನ್ನಾಭರಣ ಸೇರಿದಂತೆ ಲಕ್ಷಾಂತರ ರು. ಮೌಲ್ಯದ ಸಾಮುಗ್ರಿಗಳನ್ನು ವಶಪಡಿಸಿಕೊಂಡಿದ್ದಾರೆ.
 

 
ವಡಗಾವಿ ಗುರುದೇವ ಗಲ್ಲಿಯ ಪರಶರಾಮ ದಿಂಡಿಗಲ್, ಹಾವೇರಿಯ ಹಣಮಂತ ಕೊಂಚಿಕೊರವರ ಎಂಬಾತರೇ ಬಂಧಿತ ಆರೋಪಿಗಳಾಗಿದ್ದಾರೆ. ಹದಿನೈದು ಕಳ್ಳತನದ ಪ್ರಕರಣಗಳಲ್ಲಿ ಭಾಗಿಯಾಗಿದ್ದ ಈ ಇಬ್ಬರು ಆರೋಪಿಗಳನ್ನು ಬೆಳಗಾವಿ ಸಿಸಿಬಿ ಪೋಲೀಸರು ಪೋಲೀಸ್ ಧ್ವಜ ದಿನಾಚರಣೆ ದಿನವೇ ಬಂಧಿಸಿ, ಸಾರ್ವಜನಿಕರ ಗಮನ ಸೆಳೆದಿದ್ದಾರೆ. ಬೆಳಗಾವಿ ನಗರದ ಖಡೇಬಝಾರ ಮಾಳ ಮಾರುತಿ ಎಪಿಎಂಸಿ ಸೇರಿದಂತೆ ಖಾನಾಪುರದಲ್ಲಿ ಮನೆ ಕಳ್ಳತನ ಮಾಡಿ ಹದಿನೈದು ಸುತ್ತಿನ ರಿವಾಲ್ವರ, ಚಿನ್ನಾಭರಣ, ಬೆಳ್ಳಿಯ ಪಾತ್ರೆ, ಹೋಂ ಥೇಟರ್, ದ್ವಿಚಕ್ರ ವಾಹನ ಕದ್ದು ಪರಾರಿಯಾಗಿದ್ದ ಖದೀಮರು, ಈಗ ಪೋಲೀಸರ ಅತಿಥಿಯಾಗಿ, ಕಂಬಿ ಎಣಿಸುತ್ತಿದ್ದಾರೆ.
 
ಬಂಧಿತರಿಂದ 6.5 ಲಕ್ಷ ರು. ಮೌಲ್ಯದ ವಸ್ತುಗಳನ್ನು ವಶಪಡಿಸಿಕೊಳ್ಳಲಾಗಿದ್ದು, ಅವರನ್ನು ಇನ್ನಷ್ಟು ವಿಚಾರಣೆಗೆ ಒಳಪಡಿಸಲಾಗುತ್ತಿದೆ. ಅದರಂತೆ ಎಪಿಎಂಸಿ ಠಾಣೆ ವ್ಯಾಪ್ತಿಯಲ್ಲಿ ನಡೆದ ಕಳ್ಳತನ ಪ್ರಕರಣಗಳಿಗೆ ಸಮಂಧಿಸಿ ಕೊತ್ವಾಲ ಗಲ್ಲಿಯ ನಾಝೀಮ ಅಲ್ಲಾವದ್ದೀನ ಮುಲ್ಲಾ ಹಾಗೂ ಕಾಕರ ಗಲ್ಲಿಯ ಆದಿಲ್ ಜಮಾದಾರ ಎಂಬಾತರನ್ನು ಬಂಧಿಸಿ ಹತ್ತು ಲಕ್ಷ ರು.ಮೌಲ್ಯದ ಆಭರಣಗಳನ್ನು ವಶಪಡಿಸಿಕೊಂಡಿರುವ ಕುರಿತು ನಗರ ಪೋಲೀಸ್ ಆಯುಕ್ತ ಕೃಷ್ಣಭಟ್ ಮಾಧ್ಯಮಕ್ಕೆ ತಿಳಿಸಿದ್ದಾರೆ.

ತಾಜಾ ಸುದ್ದಿಗಳಿಗಾಗಿ ವೆಬ್ ದುನಿಯಾ ಮೊಬೈಲ್ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ.

Share this Story:

Follow Webdunia kannada

ಮುಂದಿನ ಸುದ್ದಿ

ಮುಂದೂಡಿದ ಮಹದಾಯಿ ಸಭೆ: ರಾಜ್ಯ ಬಿಜೆಪಿಗೆ ನುಂಗಲಾರದ ತುತ್ತು