Select Your Language

Notifications

webdunia
webdunia
webdunia
webdunia

ರಿವಾಲ್ವರ್‌ನಿಂದ ಗುಂಡು ಹಾರಿಸಿಕೊಂಡು ಸರ್ಕಲ್ ಇನ್ಸ್‌ಪೆಕ್ಟರ್ ‌ಆತ್ಮಹತ್ಯೆ

ರಿವಾಲ್ವರ್‌ನಿಂದ ಗುಂಡು ಹಾರಿಸಿಕೊಂಡು ಸರ್ಕಲ್ ಇನ್ಸ್‌ಪೆಕ್ಟರ್ ‌ಆತ್ಮಹತ್ಯೆ
ಕೋಲಾರ , ಮಂಗಳವಾರ, 18 ಅಕ್ಟೋಬರ್ 2016 (09:19 IST)
ರಿವಾಲ್ವರ್‌ನಿಂದ ಗುಂಡು ಹಾರಿಸಿಕೊಂಡು ಸರ್ಕಲ್ ಇನ್ಸ್‌ಪೆಕ್ಟರ್ ಒಬ್ಬರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಕೋಲಾರದ ಮಾಲೂರು ಪೊಲೀಸ್ ಠಾಣೆಯಲ್ಲಿ ಈ ದುರ್ಘಟನೆ ನಡೆದಿದೆ. 
ಮೃತರು ಕಳೆದ ಒಂದುವರೆ ವರ್ಷಗಳಿಂದ ಕೋಲಾರದ ಮಾಲೂರು ಪಟ್ಟಣದ ಠಾಣೆಯಲ್ಲಿ ಸರ್ಕಲ್ ಇನ್ಸಪೆಕ್ಟರ್ ಆಗಿದ್ದರು. 
 
ಸ್ಥಳಕ್ಕೆ ಭೇಟಿ ನೀಡಿರುವ ಎಸ್‌ಪಿ ದಿವ್ಯಾ ಗೋಪಿನಾಥ್ ಪರಿಶೀಲನೆ ನಡೆಸುತ್ತಿದ್ದಾರೆ. 
 
ಸೋಮವಾರ- ಮಂಗಳವಾರದ ನಡುವಿನ ರಾತ್ರಿ 1.30 ರ ಸುಮಾರಿಗೆ ಕಚೇರಿಗೆ ಬಂದಿದ್ದ ರಾಘವೇಂದ್ರ ಆತ್ಮಹತ್ಯೆಗೆ ಶರಣಾಗಿದ್ದಾರೆ.  
 
ಘಟನೆಗೆ ಕಾರಣ ತಿಳಿದು ಬಂದಿಲ್ಲ. ನನ್ನ ಸಾವಿಗೆ ನಾನೇ ಕಾರಣ ಎಂದು ಅವರು ಡೆತ್ ನೋಟ್ ಬರೆದಿಟ್ಟಿದ್ದಾರೆ ಎಂದು ತಿಳಿದು ಬಂದಿದೆ. ಕೌಟುಂಬಿಕ ಸಮಸ್ಯೆಯಿಂದ ಅವರು ಈ ನಿರ್ಧಾರಕ್ಕೆ ಬರಲು ಕಾರಣವಾಯಿತೋ ಅಥವಾ ಕೆಲಸದ ಒತ್ತಡಕ್ಕೆ ಹೀಗೆ ಮಾಡಿಕೊಂಡರೇ ಎಂಬುದು ತನಿಖೆಯ ಬಳಿಕವಷ್ಟೇ ಹೊರಬೀಳಲಿದೆ. 
 
ರಾಘವೇಂದ್ರ ಮೂಲತಃ ಕೋಲಾರದ ವೇಮಗಲ್‌ನವರಾಗಿದ್ದು 2003ನೇ ಬ್ಯಾಚ್ ಇನ್ಸಪೆಕ್ಟರ್ ಆಗಿದ್ದರು. ಅವರ ಮೂವರು ಹಿರಿಯ ಸಹೋದರರು ಸ್ಥಳಕ್ಕಾಗಮಿಸಿದ್ದಾರೆ. 

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ 

Share this Story:

Follow Webdunia kannada

ಮುಂದಿನ ಸುದ್ದಿ

ಆಸ್ಪತ್ರೆಯಲ್ಲಿ ಅಗ್ನಿ ದುರಂತ: 24 ದುರ್ಮರಣ