Select Your Language

Notifications

webdunia
webdunia
webdunia
webdunia

ವೈಯಕ್ತಿಕ ಹತಾಶೆಯಿಂದ ರೋಹಿತ್ ವೇಮುಲ ಆತ್ಮಹತ್ಯೆ

ವೈಯಕ್ತಿಕ ಹತಾಶೆಯಿಂದ ರೋಹಿತ್ ವೇಮುಲ ಆತ್ಮಹತ್ಯೆ
ನವದೆಹಲಿ , ಗುರುವಾರ, 6 ಅಕ್ಟೋಬರ್ 2016 (15:39 IST)
ಹೈದರಾಬಾದ್ ವಿಶ್ವವಿದ್ಯಾಲಯದ ಸಂಶೋಧನಾ ವಿದ್ಯಾರ್ಥಿ ರೋಹಿತ್ ವೇಮುಲ ಆತ್ಮಹತ್ಯೆ ಮಾಡಿಕೊಂಡಿದ್ದು ವೈಯಕ್ತಿಕ ಕಾರಣಗಳಿಗಾಗಿ ಹೊರತು ತಾರತಮ್ಯಕ್ಕೆ ಬೇಸತ್ತು ಅಲ್ಲ ಎಂದು ತನಿಖಾ ವರದಿ ಬಹಿರಂಗ ಪಡಿಸಿದೆ.
ವರದಿಗಳ ಪ್ರಕಾರ ಆತ್ಮಹತ್ಯೆ ಮಾಡಿಕೊಳ್ಳುವುದಕ್ಕೆ ಸಂಬಂಧಿಸಿದಂತೆ ವೇಮುಲ ನಿರ್ಧಾರ ಸಂಪೂರ್ಣವಾಗಿ ಆತನದೇ ಆಗಿತ್ತು. ಹೊರತು ಇದರಲ್ಲಿ ವಿಶ್ವವಿದ್ಯಾಲಯ ಆಡಳಿತ ಮಂಡಳಿ ಅಥವಾ ಸರ್ಕಾರದ ಪಾತ್ರವಿಲ್ಲ. ಆತನ ಆತ್ಮಹತ್ಯೆ ಲಾಭವನ್ನು ಪಡೆದುಕೊಳ್ಳಲು ಆತನನ್ನು ದಲಿತನೆಂದು ಬಿಂಬಿಸಲಾಯಿತು. ವಾಸ್ತವವಾಗಿ ಆತ ದಲಿತನೇ ಅಲ್ಲ ಎಂದು ವರದಿ ತಿಳಿಸಿದೆ.
 
ಸಂಶೋಧನಾ ವಿದ್ಯಾರ್ಥಿ ವೇಮುಲ ಆತ್ಮಹತ್ಯೆಗೆ ಸಂಬಂಧಿಸಿದಂತೆ ತನಿಖೆ ನಡೆಸಲು ಕೇಂದ್ರ ಮಾನವ ಸಂಪನ್ಮೂಲ ಅಭಿವೃದ್ಧಿ ಇಲಾಖೆ ಕಳೆದ ಜನೇವರಿ 28, 2016ರಂದು ನಿವೃತ್ತ ನ್ಯಾಯಮೂರ್ತಿ ಎ.ಕೆ. ರೂಪನ್ವಾಲಾ ನೇತೃತ್ವದಲ್ಲಿ ಆಯೋಗವೊಂದನ್ನು ರಚಿಸಿತ್ತು. 
 
ತನಿಖೆಯನ್ನು ನಡೆಸಿ ಕಳೆದ ಆಗಸ್ಟ್ ತಿಂಗಳಲ್ಲಿ 41 ಪುಟಗಳ ವರದಿಯನ್ನು ನೀಡಿರುವ ಆಯೋಗ, ರೋಹಿತ್ ವೈಯಕ್ತಿಕ ಕಾರಣಕ್ಕಾಗಿ ಸಾವಿಗೆ ಶರಣಾದರು. ಆದರೆ ಮೀಸಲಾತಿ ಪ್ರಯೋಜನವನ್ನು ಪಡೆಯುವು ದುರುದ್ದೇಶದಿಂದ ರೋಹಿತ್ ತಾಯಿ ರಾಧಾ ತಾನು ದಲಿತಳು ಎಂದು ಬಿಂಬಿಸಿಕೊಂಡಳು. ಆದರೆ ಅಸಲಿಗೆ ಅವರು ಪರಿಶಿಷ್ಟ ಜಾತಿಗೆ ಸೇರಿದವರು ಎಂಬುದು ನಂಬಲಾಗದ ವಿಷಯ ಎಂದು ವರದಿ ಹೇಳಿದೆ. 

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ 

Share this Story:

Follow Webdunia kannada

ಮುಂದಿನ ಸುದ್ದಿ

ಸಂಗೊಳ್ಳಿ ರಾಯಣ್ಣ ಬ್ರಿಗೇಡ್‌ ಕೈಬಿಡಿ: ಈಶ್ವರಪ್ಪಗೆ ಬಿಜೆಪಿ ತಾಕೀತು