Select Your Language

Notifications

webdunia
webdunia
webdunia
webdunia

ಸೆಲ್ಫಿ ವಿಡಿಯೋ ಮಾಡಿಟ್ಟು ಸಾವಿಗೆ ಶರಣಾದ ಭಗ್ನ ಪ್ರೇಮಿ ಹೇಳಿದ್ದೇನು?

ಸೆಲ್ಫಿ ವಿಡಿಯೋ ಮಾಡಿಟ್ಟು ಸಾವಿಗೆ ಶರಣಾದ ಭಗ್ನ ಪ್ರೇಮಿ ಹೇಳಿದ್ದೇನು?
ಕೊಪ್ಪಳ , ಬುಧವಾರ, 12 ಅಕ್ಟೋಬರ್ 2016 (11:31 IST)
ಪ್ರೀತಿಸಿದ ಹುಡುಗಿ ಜತೆ ಮದುವೆಗೆ ಆಕೆಯ ಪೋಷಕರು ವಿರೋಧ ವ್ಯಕ್ತ ಪಡಿಸಿದ್ದರಿಂದ ನೊಂದ ಭಗ್ನಪ್ರೇಮಿಯೊಬ್ಬ ಆತ್ಮಹತ್ಯೆಗೆ ಶರಣಾದ ದಾರುಣ ಘಟನೆ ಕೊಪ್ಪಳದಲ್ಲಿ ಅಕ್ಟೋಬರ್ 10 ರಂದು ನಡೆದಿದ್ದು ಬಹಳ ತಡವಾಗಿ ಬೆಳಕಿಗೆ ಬಂದಿದೆ. 

 
ಮೃತ ಕಿರಣ್ ಹುಬ್ಬಳ್ಳಿಯ ಖಾಸಗಿ ಕಂಪನಿಯಲ್ಲಿ ಉದ್ಯೋಗದಲ್ಲಿದ್ದು ಕೊಪ್ಪಳ ಜಿಲ್ಲೆ, ಗಂಗಾವತಿ ತಾಲ್ಲೂಕಿನ ಜೀರಾಳ ಕಲ್ಗುಡಿ ಗ್ರಾಮದ ನಿವಾಸಿಯಾಗಿದ್ದಾನೆ. ತನ್ನ ಸಂಬಂಧಿ ಯುವತಿಯೋರ್ವಳನ್ನು ಪ್ರೀತಿಸುತ್ತಿದ್ದ ಕಿರಣ್, ತಮ್ಮಿಬ್ಬರ ಮದುವೆಗೆ ಯುವತಿ ಪೋಷಕರು ವಿರೋಧ ವ್ಯಕ್ತಪಡಿಸುತ್ತಿದ್ದಾರೆಂದು ಕೊಪ್ಪಳದ ಮುನಿರಾಬಾದ್‌ನಲ್ಲಿರುವ ಯುವತಿಯ ಮನೆ ಮುಂದೆ ಅಕ್ಟೋಬರ್ 10 ರಂದು ವಿಷ ಸೇವಿಸಿ ಆತ್ಮಹತ್ಯೆಗೆ ಶರಣಾಗಿದ್ದ. ಗಂಭೀರ ಸ್ಥಿತಿಯಲ್ಲಿದ್ದ ಆತನನ್ನು ಜಿಲ್ಲಾಸ್ಪತ್ರೆಗೆ ಸೇರಿಸಲಾಗಿತ್ತು. ಆದರೆ ಚಿಕಿತ್ಸೆ ಫಲಕಾರಿಯಾಗದೆ ಆತ ಕೊನೆಯುಸಿರೆಳೆದಿದ್ದಾನೆ. 
 
ಸಾಯುವ ಮುನ್ನ ಯುವಕ ಸೆಲ್ಫಿ ವಿಡಿಯೋ ಮಾಡಿಟ್ಟಿದ್ದು ಅದರಲ್ಲಿ ಯುವತಿಯ ಪೋಷಕರನ್ನು ತನ್ನ ಸಾವಿಗೆ ಕಾರಣರಾಗಿಸಿದ್ದಾನೆ. 
 
ವಿಡಿಯೋದಲ್ಲಿ ಆತ ಹೇಳಿದ್ದೇನು:  ನಾನು ಸಾಯುತ್ತಿದ್ದೇನೆ. ಅದಕ್ಕೆ ಕಾರಣ ಪ್ರೇಮ. ನಾನು ಅನನ್ಯ(ಹೆಸರು ಬದಲಿಸಲಾಗಿದೆ)ಳನ್ನು ಕಳೆದ 2-3 ವರ್ಷದಿಂದ ಪ್ರೀತಿಸುತ್ತಿದ್ದು ನಾವಿಬ್ಬರು ಲಿವಿಂಗ್ ಟುಗೆದರ್ ಸಂಬಧವನ್ನಿಟ್ಟುಕೊಂಡಿದ್ದೆವು. ನಾನು ಉತ್ತಮ ಕೆಲಸದಲ್ಲಿದ್ದು, ಆಕೆ ಸಹ ಇತ್ತೀಚಿಗೆ ಎಂಜಿನಿಯರಿಂಗ್ ಮುಗಿಸಿದ್ದಳು. ಇಷ್ಟು ವರ್ಷ ನಮ್ಮಿಬ್ಬರ ನಡುವೆ ಎಲ್ಲವೂ ಸರಿಯಾಗಿತ್ತು. ಆದರೆ ಕಳೆದ ಮೂರ್ನಾಲ್ಕು ತಿಂಗಳಿಂದ ಅನನ್ಯ ನನ್ನ ಜತೆ ಫೋನ್ ಸಂಪರ್ಕವನ್ನು ಸಹ ಕಡಿದುಕೊಂಡಿದ್ದಳು. ನಾನು ಉತ್ತಮ ಕೆಲಸದಲ್ಲಿಲ್ಲ ಎಂದು ಆರೋಪಿಸುತ್ತಿದ್ದ ಆಕೆಯ ಪೋಷಕರು ಮದುವೆಗೆ ವಿರೋದ ವ್ಯಕ್ತಪಡಿಸಿದ್ದರಲ್ಲದೇ ಆಕೆಗೆ ಬೇರೊಬ್ಬನ ಜತೆ ಮದುವೆ ಮಾಡಿಸುವ ಪ್ರಯತ್ನದಲ್ಲಿದ್ದರು. ಇದರಿಂದ ನೊಂದಿರುವ ನಾನು ಸಾವಿಗೆ ಶರಣಾಗುತ್ತಿದ್ದೇನೆ. ನನಗೆ ಅವಳನ್ನು ಬಿಟ್ಟಿರಲು ಆಗುತ್ತಿಲ್ಲ. ನನ್ನ ಸಾವಿಗೆ ಅನನ್ಯ ಮತ್ತು ಆಕೆಯ ತಾಯಿ ಕಾರಣರು, ಅಪ್ಪ ಅಮ್ಮ ನನ್ನನ್ನು ಕ್ಷಮಿಸಿ. ಅವಳಿಲ್ಲದ ಬದುಕು ನನಗೆ ಬೇಡ. 
 
ಬೆಳೆದ ಮಗನ ಅಕಾಲಿಕ ಮರಣದಿಂದ ನೊಂದಿರುವ ಕುಟುಂಬಸ್ಥರು ಯುವತಿಯ ಪೋಷಕರ ವಿರುದ್ಧ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದು ತಮ್ಮ ಮಗನ ಸಾವಿಗೆ ನ್ಯಾಯ ದೊರಕಿಸಿ ಕೊಡಬೇಕೆಂದು ಆಗ್ರಹಿಸಿದ್ದಾರೆ. 

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ

Share this Story:

Follow Webdunia kannada

ಮುಂದಿನ ಸುದ್ದಿ

ಜಯಲಲಿತಾ ಭೇಟಿಗೆ ಅಮಿತ್ ಶಾ, ಅರುಣ್ ಜೇಟ್ಲಿ ?