Select Your Language

Notifications

webdunia
webdunia
webdunia
webdunia

ಆಸ್ಪತ್ರೆಯಲ್ಲಿ ಅಗ್ನಿ ದುರಂತ: 24 ದುರ್ಮರಣ

ಆಸ್ಪತ್ರೆಯಲ್ಲಿ ಅಗ್ನಿ ದುರಂತ: 24 ದುರ್ಮರಣ
ಭುವನೇಶ್ವರ , ಮಂಗಳವಾರ, 18 ಅಕ್ಟೋಬರ್ 2016 (08:54 IST)
ಒಡಿಶಾದ ರಾಜಧಾನಿ ಭುವನೇಶ್ವರದ ಖಾಸಗಿ ಆಸ್ಪತ್ರೆ ಸೋಮವಾರ ರಾತ್ರಿ ಭೀಕರ ಅಗ್ನಿಗುರಂತ ಸಂಭವಿಸಿದ್ದು ಕನಿಷ್ಠ 24 ಜನರು ದುರ್ಮರವನ್ನಪ್ಪಿದ್ದಾರೆ. ಅವಘಡದಲ್ಲಿ ಅನೇಕರು ಗಾಯಗೊಂಡಿದ್ದು ಅವರನ್ನು ಬೇರೆ ಬೇರೆ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ.

ಎಸ್.ಯು.ಎಂ ಆಸ್ಪತ್ರೆಯಲ್ಲಿ ಈ ದುರಂತ ನಡೆದಿದ್ದು, ಕಟ್ಟಡದ ಎರಡನೆಯ ಮಹಡಿಯ ಡಯಾಲಿಸಿಸ್ ವಾರ್ಡ್ ಒಂದರಲ್ಲಿ ಶಾರ್ಟ್ ಸರ್ಕ್ಯೂಟ್ ಸಂಭವಿಸಿದ್ದು ಘಟನೆಗೆ ಕಾರಣ ಎನ್ನಲಾಗುತ್ತಿದೆ. ಇಲ್ಲಿಂದ ಬೆಂಕಿ ಬೇರೆ ವಾರ್ಡ್‌ಗಳಿಗೆ ಹರಡಿ ತೀವ್ರ ನಿಗಾ ಘಟಕಕ್ಕೂ ವ್ಯಾಪಿಸಿದೆ. ಹೊಗೆಯಿಂದ ಉಸಿರುಗಟ್ಟಿ 22 ಜನರು ಸ್ಥಳದಲ್ಲೇ ದುರ್ಮರವನ್ನಪ್ಪಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ. ಮತ್ತಿಬ್ಬರು ಆಸ್ಪತ್ರೆಯಲ್ಲಿ ಕೊನೆಯುಸಿರೆಳೆದಿದ್ದಾರೆ. 
 
ದುರಂತಕ್ಕೆ ಪ್ರಧಾನಿ ಮೋದಿ ಗಾಢ ಶೋಕ ವ್ಯಕ್ತ ಪಡಿಸಿದ್ದಾರೆ. ಅವರ ಸೂಚನೆಯ ಮೇರೆಗೆ ಕೆಲವು ರೋಗಿಗಗಳನ್ನು ಎಐಐಎಮ್ಎಸ್ ಆಸ್ಪತ್ರೆಗೆ ರವಾನಿಸಲಾಗಿದೆ. 

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ 

Share this Story:

Follow Webdunia kannada

ಮುಂದಿನ ಸುದ್ದಿ

ಯುಪಿ ಚುನಾವಣೆಯಲ್ಲಿ ಬಿಜೆಪಿ ಸಿಎಂ ಅಭ್ಯರ್ಥಿ ಘೋಷಣೆಯಿಲ್ಲ: ಮೌರ್ಯ