Select Your Language

Notifications

webdunia
webdunia
webdunia
webdunia

ಹಾಟ್ ನಟಿ ಕಿಮ್ ಕರದರ್ಶನ್‌ ಮನೆ ದರೋಡೆ: ವಜ್ರ, ಚಿನ್ನಾಭರಣ ಲೂಟಿ

ಹಾಟ್ ನಟಿ ಕಿಮ್ ಕರದರ್ಶನ್‌ ಮನೆ ದರೋಡೆ: ವಜ್ರ, ಚಿನ್ನಾಭರಣ ಲೂಟಿ
ಪ್ಯಾರಿಸ್ , ಸೋಮವಾರ, 3 ಅಕ್ಟೋಬರ್ 2016 (14:42 IST)
ವಿಶ್ವದಲ್ಲಿಯೇ ಖ್ಯಾತಳಾದ ಅಮೆರಿಕದ ರಿಯಾಲಿಟಿ ಶೋ ನಟಿ ಕಿಮ್ ಕರದರ್ಶನ್ ಅವರ ಐಷಾರಾಮಿ ನಿವಾಸದ ಮೇಲೆ ದಾಳಿ ಮಾಡಿದ ಮುಸುಕುಧಾರಿಗಳು ಬಂದೂಕು ತೋರಿಸಿ ಮಿಲಿಯನ್‌ ಡಾಲರ್‌ಗಳಿಗಿಂತಲು ಹೆಚ್ಚಿನ ಬೆಲೆಬಾಳುವ ಆಭರಣಗಳು ಮತ್ತು ನಗದು ಹಣವನ್ನು ದೋಚಿ ಪರಾರಿಯಾಗಿದ್ದಾರೆ. 

ಇಂದು ಬೆಳಗಿನ ಜಾವ ಸುಮಾರು 3 ಗಂಟೆಗೆ ಮನೆಗೆ ನುಗ್ಗಿದ ಐವರು ಪೊಲೀಸರ ಡ್ರೆಸ್ ಧರಿಸಿ ಮುಸುಕುಧರಿಸಿ ಮನೆಗೆ ನುಗ್ಗಿ ಚಿನ್ನಾಭರಣ ಲೂಟಿ ಮಾಡಿದ್ದಾರೆ. ಮನೆ ದರೋಡೆಯಾದ ಘಟನೆ ಟೆಲಿವಿಜನ್‌ಗಳಲ್ಲಿ ಬಿತ್ತರವಾಗುತ್ತಿದ್ದಂತೆ ಕರದರ್ಶನ್ ಪತಿ ಕಾನ್ಯೆ ವೆಸ್ಟ್, ನಿವಾಸಕ್ಕೆ ಧಾವಿಸಿದ್ದಾರೆ.  
 
ಕರದರ್ಶನ್‌ಗೆ ಯಾವುದೇ ದೈಹಿಕ ಹಿಂಸೆ ನೀಡಿದ ಆರೋಪಿಗಳು ಕೇವಲ ರಿವಾಲ್ವರ್‌ನಿಂದ ಬೆದರಿಸಿದ್ದಾರೆ ಎಂದು ಕರದರ್ಶನ್ ವಕ್ತಾರರು ಪೊಲೀಸರಿಗೆ ಮಾಹಿತಿ ನೀಡಿದ್ದಾರೆ.
 
ಕಿಮ್ ಕರದರ್ಶನ್ ತಮ್ಮ ಸಹೋದರಿ ಕೆಂಡಾಲ್ ಜೆನ್ನರ್ ಮತ್ತು ಕೌರ್ಟನಿ ಕರದರ್ಶನ್ ಅವರೊಂದಿಗೆ ಪ್ಯಾರಿಸ್‌ ಮನೆಯಲ್ಲಿದ್ದರು ಎಂದು ಪೊಲೀಸ್ ಮೂಲಗಳು ತಿಳಿಸಿವೆ.

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ 

Share this Story:

Follow Webdunia kannada

ಮುಂದಿನ ಸುದ್ದಿ

ನಮ್ಮ ಸೈನಿಕರೇ ಶ್ರೇಷ್ಠ, ಸಿನೆಮಾ ಹಿರೋಗಳಲ್ಲ: ಸಲ್ಮಾನ್‌ಗೆ ನಾನಾ ಪಾಟೇಕರ್ ಟಾಂಗ್