Publish Date: Tue, 25 Jun 2019 (18:24 IST)
Updated Date: Tue, 25 Jun 2019 (18:29 IST)
ಆ ಕಾರಣಕ್ಕೆ ಫೇಸ್ ಬುಕ್ ಲೈವ್‌ನಲ್ಲಿ ವಿಷ ಸೇವಿಸಿ ವ್ಯಕ್ತಿಯೊಬ್ಬ ಆತ್ಮಹತ್ಯೆಗೆ ಯತ್ನ ನಡೆಸಿರುವ ಘಟನೆ ನಡೆದಿದೆ.
ಕೋಲಾರದಲ್ಲಿ ಫೇಸ್ ಬುಕ್ ಲೈವ್‌ನಲ್ಲಿ ವಿಷ ಸೇವಿಸಿ ವ್ಯಕ್ತಿಯೊಬ್ಬ ಆತ್ಮಹತ್ಯೆಗೆ ಯತ್ನ ನಡೆಸಿದ್ದಾನೆ. ಕೋಲಾರದ ಶ್ರೀನಿವಾಸಪುರ ನಗರದ ಈದ್ಗಾ ಮಸೀದಿ ಬಳಿ ಕಾರಿನಲ್ಲಿ ಕುಳಿತು ವಿಷ ಸೇವಿಸಿದ್ದಾನೆ ವ್ಯಕ್ತಿ.
ಸುಲೇಮಾನ್ (28) ಆತ್ಮಹತ್ಯೆಗೆ ಯತ್ನಿಸಿದ ವ್ಯಕ್ತಿಯಾಗಿದ್ದಾನೆ.
ಕಾರಿನಲ್ಲಿ ಕುಳಿತು ತನ್ನ ಮೊಬೈಲ್‌ನಲ್ಲೇ ವಿಷ ಸೇವಿಸುತ್ತಾ ವಿಡಿಯೋ ರೆಕಾರ್ಡ್ ಮಾಡಿದ್ದನು ಸುಲೇಮಾನ್.
ಶ್ರೀನಿವಾಸಪುರ ಪಟ್ಟಣದ ಹೈದರಾಲಿ ಮೊಹಲ್ಲಾ ನಿವಾಸಿಯಾಗಿರುವ ಸುಲೇಮಾನ್ ಗೆ ಇಬ್ಬರು ಮಕ್ಕಳಿದ್ದಾರೆ. ಕಾರು ಚಾಲನೆ ಮಾಡಿ ಜೀವನ ಸಾಗಿಸ್ತಿದ್ದಾನೆ.
ಘಟನಾ ಸ್ಥಳದಲ್ಲಿದ್ದವರು ಅನುಮಾನಸ್ಪದ ಮೇರೆಗೆ ವೀಕ್ಷಿಸಿದಾಗ ವಿಷ ಸೇವನೆ ಮಾಡಿದ್ದನ್ನು ತಿಳಿದು ಸ್ಥಳೀಯ ಆಸ್ಪತ್ರೆಗೆ ದಾಖಲು ಮಾಡಿದ್ದಾರೆ. ಸುಲೇಮಾನ್ ಆತ್ಮಹತ್ಯೆಗೆ ಇನ್ನೂ ಕಾರಣ ತಿಳಿದು ಬಂದಿಲ್ಲ. ಶ್ರೀನಿವಾಸಪುರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.