Publish Date: Mon, 24 Jun 2019 (15:38 IST)
Updated Date: Mon, 24 Jun 2019 (15:41 IST)
ವಿಷ ಹಾಕಿ ಹುಲಿಯೊಂದನ್ನು ಕೊಂದಿರಬಹುದು. ಹೀಗಂತ ಬಲವಾದ ಶಂಕೆ ಹಾಗೂ ಆರೋಪಗಳು ಕೇಳಿಬಂದಿವೆ.
ಮೈಸೂರಿನಲ್ಲಿ ಮತ್ತೊಂದು ಹುಲಿ ಸಾವನ್ನಪ್ಪಿದೆ. ಅನುಮಾನಸ್ಪದವಾಗಿ ಮೃತಪಟ್ಟಿದೆ ಹುಲಿ.
ಎಚ್.ಡಿ.ಕೋಟೆ ತಾಲೂಕಿನ ಟೈಗರ್ ಬ್ಲಾಕ್‌ನಲ್ಲಿ ಹುಲಿ ಶವ ಪತ್ತೆಯಾಗಿದೆ. ಹುಲಿಗೆ ವಿಷ ಹಾಕಿ ಕೊಂದಿರಬಹುದೆಂಬ ಶಂಕೆ ವ್ಯಕ್ತವಾಗಿದೆ.
ಕೊಳೆತ ಸ್ಥಿತಿಯಲ್ಲಿ ಪತ್ತೆಯಾದ ಹುಲಿಯ ಮೃತದೇಹ ಇದಕ್ಕೆ ಪುಷ್ಟಿವೊದಗಿಸಿದೆ. ಕಳೆದ ವಾರವಷ್ಟೇ ಒಂದು ಹುಲಿ ಮೃತಪಟ್ಟಿತ್ತು. ಇದೀಗ ಮತ್ತೊಂದು ಹುಲಿ ಶವಪತ್ತೆಯಾಗಿ ಆತಂಕ ಸೃಷ್ಟಿಮಾಡಿದೆ.
ಹುಲಿಗಳ ಸರಣಿ ಸಾವಿನಿಂದಾಗಿ ಅರಣ್ಯ ಇಲಾಖೆಗೆ ತಲೆ ಬಿಸಿಯಾಗಲು ಕಾರಣವಾಗಿದೆ. ನಾಗರಹೊಳೆ ಅರಣ್ಯ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.