Publish Date: Mon, 28 Jan 2019 (19:08 IST)
Updated Date: Mon, 28 Jan 2019 (19:09 IST)
ಗಂಗಮ್ಮ ದೇವಾಲಯದಲ್ಲಿ ವಿಷ ಪ್ರಸಾದ ದುರಂತ ಹಿನ್ನೆಲೆಯಲ್ಲಿ ಪ್ರಸಾದ ಸೇವಿಸಿ ಮೃತಪಟ್ಟಿದ್ದ ಕವಿತಾ ಮನೆಗೆ ಸಚಿವ ಜಿ.ಟಿ.ದೇವೇಗೌಡ ಭೇಟಿ ನೀಡಿದರು.
ಚಿಕ್ಕಬಳ್ಳಾಪುರ ಜಿಲ್ಲೆಯ ಚಿಂತಾಮಣಿ ನಗರದಲ್ಲಿ ಘಟನೆ ಹಿನ್ನೆಲೆಯಲ್ಲಿ, ಸಚಿವ ಜಿ.ಟಿ.ದೇವೇಗೌಡ ರಿಂದ ಮೃತರ ಕುಟಂಬಕ್ಕೆ 20 ಸಾವಿರ ಸಹಾಯ ಧನ ವಿತರಣೆ ಮಾಡಲಾಯಿತು.
ಇದೇ ವೇಳೆ ಸಚಿವ ಹೇಳಿಕೆ ನೀಡಿದ್ದು, ಸರಕಾರದಿಂದ ಬರುವ ಸೌಲಭ್ಯ ದೊರಕುವಂತೆ ಮಾಡುತ್ತೇನೆ. ಮೃತ ಕವಿತಾ ಮಕ್ಕಳಿಗೆ ಉಚಿತ ಹಾಸ್ಟೆಲ್, ವಿದ್ಯಾಭ್ಯಾಸ ನೀಡುವ ಭರವಸೆ ನೀಡಿದರು.
ಖಾಸಗೀ ಮತ್ತು ಸರಕಾರಿ ಎರಡು ಆಸ್ಪತ್ರೆಗಳ ಖರ್ಚು ಸರಕಾರ ಭರಿಸುತ್ತದೆ. ವಿನಾಕಾರಣ ಅಸ್ವಸ್ಥ ಕುಟುಂಬಕ್ಕೆ ಕಿರುಕುಳ ಕೊಟ್ಟರೆ ಕಠಿಣ ಕ್ರಮ ಎಂದರು.