Publish Date: Sun, 27 Jan 2019 (15:14 IST)
Updated Date: Sun, 27 Jan 2019 (15:15 IST)
ಗಂಗಮ್ಮದೇಗುಲ ವಿಷ ಪ್ರಸಾದ ಪ್ರಕರಣಕ್ಕೆ ಸಂಬಂಧಿಸಿದಂತೆ ತನಿಖೆ ತೀವ್ರಗೊಂಡಿದೆ. ಅಡುಗೆ ಮಾಡಿ ಕೊಟ್ಟಿದ್ದೇ ಅಮರಾವತಿ ಎನ್ನಲಾಗಿದ್ದು, ಆಕೆಯ ಹುಡುಕಾಟ ತೀವ್ರಗೊಂಡಿದೆ.
ಪ್ರಕರಣದ ಮೊದಲ ಆರೋಪಿ ಅಮರಾವತಿಯಾಗಿದ್ದಾಳೆ. ಪೂಜಾರಿ ಜೊತೆ ಸೇರಿ ಸಂಚು ರೂಪಿಸಿರುವುದಾಗಿ ಆರೋಪ ಕೇಳಿಬಂದಿದೆ.
ಸಣ್ಣ ಹೋಟೆಲ್ ಒಂದರಲ್ಲಿ ಕಳೆದ 15 ದಿನದಿಂದ ಕೆಲಸ ಮಾಡುತ್ತಿದ್ದ ಮಹಿಳೆ. ಚಿಂತಾಮಣಿ ನಗರದ ಹೋಟೆಲ್ ನಲ್ಲಿ ಪಾತ್ರೆ ತೊಳೆಯುವ ಕೆಲಸ ಮಾಡುತ್ತಿದ್ದಳು. ಘಟನೆ ನಡೆದ ಹಿಂದಿನ ದಿನ ಕೆಲಸಕ್ಕೆ ರಜೆ ಹಾಕಿ ಮನೆಯಲ್ಲೆ ಸಜ್ಜಿಗೆ ತಯಾರಿಸಿ ಆರೋಪಿ ನೀಡಿದ್ದಳು ಎನ್ನಲಾಗಿದೆ.
ಘಟನೆ ನಡೆದ ದಿನ ಬೆಳಿಗ್ಗೆ ತರಾತುರಿಯಲ್ಲಿ ಬಂದು ಹೋಟೆಲ್ ಮಾಲೀಕರಿಂದ ಹಣ ಪಡೆದ ಆರೋಪಿ, ಕೆಲಸಕ್ಕೆ ಬರುವುದಾಗಿ ಹೇಳಿ ಹೋದಾಕೆ ಎಸ್ಕೇಪ್ ಆಗಿದ್ದಾಳೆ.
ವಿಚಾರಣೆ ವೇಳೆ ಪ್ರಸಾದ ಹಂಚಿದ್ದ ಮಹಿಳೆಯರಿಂದ ಪೊಲೀಸರಿಗೆ ಮಾಹಿತಿ ನೀಡಲಾಗಿದೆ. ಸ್ಥಳಕ್ಕೆ ಪೊಲೀಸರು ಬರುವಷ್ಟರಲ್ಲಿ ಆರೋಪಿ ಎಸ್ಕೇಪ್ ಆಗಿದ್ದಾಳೆ ಎಂದು ಮೂಲಗಳು ತಿಳಿಸಿವೆ.