Publish Date: Sun, 27 Jan 2019 (14:52 IST)
Updated Date: Sun, 27 Jan 2019 (14:53 IST)
ಗಂಗಮ್ಮದೇಗುಲದ ವಿಷ ಪ್ರಸಾದ ಪ್ರಕರಣ ನಡೆದ ಘಟನಾ ಸ್ಥಳಕ್ಕೆ ಸಂಸದ ಭೇಟಿ ನೀಡಿದ್ದಾರೆ.
ಸಂಸದ ಕೆ. ಹೆಚ್. ಮುನಿಯಪ್ಪ ಭೇಟಿ ನೀಡಿ, ಅಸ್ವಸ್ಥಗೊಂಡವರನ್ನು ವಿಚಾರಿಸಿದರು. ಕೋಲಾರ ಲೋಕಸಭಾ ಕ್ಷೇತ್ರದ ಸಂಸದ ಮುನಿಯಪ್ಪ, ಚಿಂತಾಮಣಿ ಡೆಕ್ಕನ್ ಅಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ಅಸ್ವಸ್ಥರನ್ನು ಭೇಟಿ ಮಾಡಿದರು.
ಪ್ರಸಾದ ಹಂಚಿದವರ ಬಗ್ಗೆ ಈಗಾಗಾಲೇ ವಿಚಾರಣೆ ನಡೆಯುತ್ತಿದೆ. ಪೊಲೀಸ್ ಇಲಾಖೆ ಹಗೂ ಆರೋಗ್ಯ ಇಲಾಖೆ ಚುರುಕು ಗತಿಯಲ್ಲಿ ವಿಚಾರಣೆ ನಡೆಸುತ್ತಿದೆ. ಶೀಘ್ರ ಆರೋಪಿಗಳನ್ನು ಪತ್ತೆ ಹಚ್ಚುವ ಸಾಧ್ಯತೆ ಇದೆ. ಅವರಿಗೆ ಕಠಿಣ ಶಿಕ್ಷೆಯಾಗುವಂತೆ ಒತ್ತಾಯಿಸುತ್ತೇನೆ ಎಂದರು.